ಮನೆಯಲ್ಲಿ ಔಷಧಿಗಳನ್ನು ಸರಿಯಾಗಿ ಸಂರಕ್ಷಿಸುವುದು ಆರೋಗ್ಯ ಕಾಪಾಡಲು ಮಾತ್ರವಲ್ಲದೆ ಮನಸ್ಸಿನ ಶಾಂತಿಗೆ ಸಹ ಸಹಾಯಕ. ಅನೇಕರು ಔಷಧಿಗಳನ್ನು ಬೇರೆ ಬೇರೆ ಕೋಣೆಗಳಲ್ಲಿ ಇಟ್ಟುಬಿಡುತ್ತಾರೆ. ವಾಸ್ತು ಶಾಸ್ತ್ರ ಪ್ರಕಾರ ಔಷಧಿಗಳನ್ನು ನೀವು ಎಲ್ಲಿ ಇಡಬೇಕು ಮತ್ತು ಎಲ್ಲಿ ಇಡಬಾರದು ಎಂಬುದಕ್ಕೂ ವಿಶೇಷ ಮಹತ್ವವಿದೆ.
- ಔಷಧಿಗಳನ್ನು ಈಶಾನ್ಯ (Northeast) ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಇಟ್ಟರೆ ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.
- ಅಗ್ನೇಯ (Southeast) ಅಥವಾ ಪಶ್ಚಿಮ (West) ದಿಕ್ಕಿನಲ್ಲಿ ಔಷಧಿಗಳನ್ನು ಇರಿಸಬೇಡಿ. ಈ ದಿಕ್ಕುಗಳಲ್ಲಿ ಔಷಧಿ ಇಡುವುದರಿಂದ ಆರೋಗ್ಯಕ್ಕೆ ಹಾನಿ ಸಂಭವಿಸಬಹುದು.
- ಹಾಸಿಗೆಯ ತಲೆಯ ಮೇಲೆ ಅಥವಾ ದಿಂಬಿನ ಕೆಳಗೆ ಔಷಧಿ ಇರಿಸಬೇಡಿ. ಇದರಿಂದ ರೋಗಿಯ ಮನಸ್ಸು ದುಃಖ ಭಾವನೆ ಬರಬಹುದು.
- ಮಕ್ಕಳು ತಲುಪದ, ಶೀತಲ, ಒಣ ಸ್ಥಳದಲ್ಲಿ ಔಷಧಿಗಳನ್ನು ಸಂಗ್ರಹಿಸಿ.
- ಹಳೆಯ ಅಥವಾ ಅವಧಿ ಮುಗಿದ ಔಷಧಿಗಳನ್ನು ಬಳಸುವ ಔಷಧಿಗಳ ಜೊತೆ ಇರಿಸಬೇಡಿ.
ಸರಿಯಾದ ದಿಕ್ಕಿನಲ್ಲಿ ಮತ್ತು ಸುರಕ್ಷಿತ ಸ್ಥಳದಲ್ಲಿ ಔಷಧಿಗಳನ್ನು ಇಡುವುದರಿಂದ ಪರಿಣಾಮಕಾರಿ ಚಿಕಿತ್ಸೆಗೆ ಸಹಾಯವಾಗುತ್ತದೆ ಮತ್ತು ಮನಸ್ಸು ಶಾಂತಿಯಾಗಿರುತ್ತದೆ ಎನ್ನುವುದು ವಸ್ತು ಶಾಸ್ತ್ರದ ನಂಬಿಕೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

