ವಾಸ್ತು ಶಾಸ್ತ್ರದಲ್ಲಿ ದಿನನಿತ್ಯದ ಸಣ್ಣ ಅಭ್ಯಾಸಗಳೂ ನಮ್ಮ ಜೀವನದ ಶಕ್ತಿ, ಮನೋಭಾವ ಮತ್ತು ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗಿದೆ. ಅದರಲ್ಲಿ ಒಂದು ಪ್ರಮುಖ ನಂಬಿಕೆ ಎಂದರೆಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡುವುದು. ಸಾಮಾನ್ಯವಾಗಿ ಜನರು ಇದನ್ನು ರೂಢಿಯಂತೆ ಮಾಡುತ್ತಾರೆ, ಆದರೆ ವಾಸ್ತು ಪ್ರಕಾರ ಇದು ಮನಸ್ಸು ಮತ್ತು ದೇಹದ ಮೇಲಿನ ಶಕ್ತಿಯ ಹರಿವಿನಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ.
- ರಾತ್ರಿ ಕನ್ನಡಿಯಲ್ಲಿ ನಕಾರಾತ್ಮಕ ಶಕ್ತಿ ಸೇರುತ್ತದೆ: ವಾಸ್ತು ಪ್ರಕಾರ, ರಾತ್ರಿ ನಿದ್ರಿಸಿದ ಸಮಯದಲ್ಲಿ ಕನ್ನಡಿ ಸುತ್ತ ಅಶುಭ ಶಕ್ತಿ ಸಂಗ್ರಹವಾಗುತ್ತದೆ. ಬೆಳಗ್ಗೆ ಎದ್ದು ಆ ಕನ್ನಡಿಯಲ್ಲಿ ನೋಡಿಕೊಳ್ಳುವುದರಿಂದ ಆ ಶಕ್ತಿ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
- ಮನಸ್ಸಿನಲ್ಲಿ ಆತಂಕ ಹೆಚ್ಚಾಗುತ್ತದೆ: ಬೆಳಗ್ಗೆ ಮುಖ ನೋಡಿದಾಗ ಕಲೆ, ಮೊಡವೆ, ಸುಕ್ಕು, ಬಿಳಿ ಕೂದಲುಗಳಂತೆ ತಮ್ಮ ನ್ಯೂನತೆಗಳು ಮೊದಲು ಕಾಣಿಸುತ್ತವೆ. ಇದು ಆತ್ಮವಿಶ್ವಾಸ ಕುಸಿತ, ಆತಂಕ ಮತ್ತು ನೆಗೆಟಿವ್ ಚಿಂತನೆಗಳಿಗೆ ಕಾರಣವಾಗಬಹುದು ಎಂದು ವಾಸ್ತು ಹೇಳುತ್ತದೆ.
- ಕನ್ನಡಿ ಶಕ್ತಿಯನ್ನು ಹಿಂತಿರುಗಿಸುತ್ತದೆ: ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿ ಪಾಸಿಟಿವ್ – ನೆಗೆಟಿವ್ ಎನ್ನುವುದಿಲ್ಲ; ಎದುರಿಗೆ ಬರುವ ಶಕ್ತಿಯನ್ನು ನೇರವಾಗಿ ಹಿಂತಿರುಗಿಸುತ್ತದೆ. ಆದ್ದರಿಂದ ಬೆಳಗಿನ ಸಮಯದಲ್ಲಿ ಶಕ್ತಿಯ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆ ಹೆಚ್ಚು.
- ಆರೋಗ್ಯ ಮತ್ತು ಮನೋಸ್ಥಿತಿಯ ಮೇಲೆ ಪರಿಣಾಮ: ಬೆಳಗ್ಗೆ ಕನ್ನಡಿಯಲ್ಲಿ ಮುಖ ನೋಡಿದರೆ ದಣಿವು ಅಥವಾ ಚಂಚಲ ಮನೋಭಾವ ಹೆಚ್ಚಾಗುತ್ತದೆ ಎಂದು ವಾಸ್ತು ನಂಬಿಕೆಗಳಿವೆ. ಇದನ್ನು ಹಿರಿಯರೂ ಅನುಭವದ ಆಧಾರದಲ್ಲಿ ಹೇಳುತ್ತಾರೆ.
ನಿಮಗೆ ಬೆಳಗ್ಗೆ ಕನ್ನಡಿಯಲ್ಲಿ ಮುಖ ನೋಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಾ? ದಿನವನ್ನು ಪಾಸಿಟಿವ್ ಆಗಿ ಆರಂಭಿಸಬಹುದೇ? ಹಾಗಿದ್ದರೆ ಈ ಅಭ್ಯಾಸದಲ್ಲಿ ತಪ್ಪೇನಿಲ್ಲ. ಆದರೆ ಆತಂಕ, ಒತ್ತಡ, ಚಂಚಲತೆ ಹೆಚ್ಚುತ್ತದೆ ಅನ್ನಿಸುವವರು ಈ ವಾಸ್ತು ಸಲಹೆಯನ್ನು ಪರಿಗಣಿಸಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

