Friday, January 9, 2026

ಯಾವುದೇ ಕಾರಣಕ್ಕೂ ವಿಬಿ ಜೀ ರಾಮ್ ಜೀ ಕಾಯ್ದೆ ವಾಪಸ್ ಪಡೆಯಲ್ಲ: ಕೇಂದ್ರ ಸಚಿವ ಧರ್ಮೇಂದ್ರ ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಕಾರಣಕ್ಕೂ ವಿಬಿ ಜೀ ರಾಮ್ ಜೀ ಕಾಯ್ದೆ ವಾಪಸ್ ಪಡೆಯಲ್ಲ: ಕೇಂದ್ರ ಸಚಿವ ಧರ್ಮೇಂದ್ರ ಸ್ಪಷ್ಟನೆ!
ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ವಿಬಿ ಜೀ ರಾಮ್ ಜೀ (VB-G RAM G) ಕಾಯ್ದೆ ವಾಪಸ್ ಪಡೆಯಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.

ವಿಬಿ ಜಿ ರಾಮ್ ಜಿ ಕಾಯ್ದೆಗೆ ಕರ್ನಾಟಕ ಸರ್ಕಾರ ವಿರೋಧ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ರಾಜಕೀಯಕ್ಕಾಗಿ ಕಾಯ್ದೆ ವಿರೋಧ ಮಾಡುತ್ತಿದೆ. ಯೋಜನೆಯನ್ನ ಮತ್ತಷ್ಟು ವಿಸ್ತಾರ ಮಾಡಿ ಮೋದಿ ಸರ್ಕಾರ ಕಾಯ್ದೆ ಜಾರಿ ಮಾಡಿದೆ. ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ.ಕಾಂಗ್ರೆಸ್ ಸರ್ಕಾರ ಮೊದಲು ನರೇಗಾ ಯೋಜನೆ ತಂದಾಗ ಗಾಂಧಿಜೀ ಹೆಸರು ಇಟ್ಟಿರಲಿಲ್ಲ. ಕಾಂಗ್ರೆಸ್ ಅವರು ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದಿಂದ ಹೋರಾಟ ವಿಚಾರಕ್ಕೆ ಕಾಂಗ್ರೆಸ್ ಅವರಿಗೆ ಏನು ಬೇಕೋ ಹಾಗೆ ಹೋರಾಟ ಮಾಡಿಕೊಳ್ಳಲಿ. ಕೇಂದ್ರ ಸರ್ಕಾರ ಬಡ ಜನರ ಅಭಿವೃದ್ಧಿಗಾಗಿ ಈ ಯೋಜನೆ ತಂದಿದೆ ಎಂದು ಕಾಯ್ದೆ ವಾಪಸ್ ಇಲ್ಲ ಎಂಬ ಸಂದೇಶ ರವಾನೆ ಮಾಡಿದರು.

error: Content is protected !!