Friday, January 9, 2026

ವೇದಾಂತ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಗರ್ವಾಲ್ ಪುತ್ರ ಅಗ್ನಿವೇಶ್ ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೇದಾಂತ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ (49) ಅಮೆರಿಕದ ನ್ಯೂಯಾರ್ಕ್‌ನಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಅಕಾಲಿಕ ಸಾವಿನ ಕುರಿತು ಅನಿಲ್ ಅಗರ್ವಾಲ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ಇದನ್ನು ತಮ್ಮ ಜೀವನದ “ಅತ್ಯಂತ ಕರಾಳ ದಿನ” ಎಂದು ಪೋಸ್ಟ್ ಮಾಡಿದ್ದಾರೆ.

ಅಗ್ನಿವೇಶ್ ಇತ್ತೀಚೆಗೆ ಅಮೆರಿಕದಲ್ಲಿ ಸ್ಕೀಯಿಂಗ್ ವೇಳೆ ಅಪಘಾತಕ್ಕೊಳಗಾಗಿದ್ದು, ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು. ಅಪಾಯದಿಂದ ಪಾರಾಗಿದ್ದಾರೆ ಎಂಬ ಭರವಸೆಯಲ್ಲಿದ್ದ ಕುಟುಂಬಕ್ಕೆ ಹಠಾತ್ ಸಂಭವಿಸಿದ ಹೃದಯಾಘಾತ ಭಾರೀ ಆಘಾತ ತಂದಿದೆ.

ಇದನ್ನೂ ಓದಿ: SNACKS | ಮನೆಯಲ್ಲೇ ಸಿಂಪಲ್‌ ಆದ ಗೋಬಿಮಂಚೂರಿ ಮಾಡ್ಬೋದು ಗೊತ್ತಾ?

1976 ಜೂನ್ 3ರಂದು ಪಾಟ್ನಾದಲ್ಲಿ ಜನಿಸಿದ ಅಗ್ನಿವೇಶ್, ಮಧ್ಯಮ ವರ್ಗದ ಕುಟುಂಬದಿಂದ ಹೊರಬಂದು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಿದ್ದರು. ಅಜ್ಮೀರ್‌ನ ಮೇಯೊ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಅವರು ಫುಜೈರಾ ಗೋಲ್ಡ್ ಸ್ಥಾಪಿಸಿ, ಬಳಿಕ ಹಿಂದೂಸ್ತಾನ್ ಜಿಂಕ್‌ನಲ್ಲಿ ನಾಯಕತ್ವ ವಹಿಸಿದ್ದರು. ಇತ್ತೀಚೆಗೆ ವೇದಾಂತ ಅಂಗಸಂಸ್ಥೆ ತಲ್ವಾಂಡಿ ರೋಬೋಟ್ ಪವರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು.

error: Content is protected !!