ಒಂದು ಕಾಲದಲ್ಲಿ ಗಾಡಿ ಖರೀದಿ ಮಾಡೋದು ಅಂದ್ರೆ ಮೈಲೇಜ್ ಮತ್ತು ಲುಕ್‌ಗಳಿಗಷ್ಟೇ ಚರ್ಚೆ ಸೀಮಿತವಾಗಿತ್ತು. ಆದರೆ ಇಂದಿನ ದಿನಗಳಲ್ಲಿ “ಗಾಡಿಗಳಿಗೆ ಹಾಕುವ ಪೆಟ್ರೋಲ್ ಗೆ ದುಡ್ಡು ಸುರಿಯೋದು ಯಾರು ” ಎಂಬ ಪ್ರಶ್ನೆಯೇ ಪ್ರಮುಖವಾಗಿದೆ. ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದು, ಮತ್ತೊಂದೆಡೆ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಈ ಎರಡರ ನಡುವೆ ಎಲೆಕ್ಟ್ರಿಕ್ ವಾಹನಗಳು (EV) ಹೊಸ ಆಯ್ಕೆಯಾಗಿ ವೇಗವಾಗಿ ಬೆಳೆಯುತ್ತಿವೆ. ಹಾಗಾದರೆ ನಿಜಕ್ಕೂ ಯಾವುದು ಉತ್ತಮ? ಪೆಟ್ರೋಲ್ ಗಾಡಿಯೇ ಅಥವಾ EV ಗಾಡಿಯೇ? ಉತ್ತರ ಎಲ್ಲರಿಗೂ ಒಂದೇ ಆಗುವುದಿಲ್ಲ. ನಿಮ್ಮ ಬಳಕೆ, ಬಜೆಟ್ ಮತ್ತು ಜೀವನಶೈಲಿಯ ಮೇಲೆ ಅದು ನಿರ್ಧಾರವಾಗುತ್ತದೆ.
ಖರ್ಚು ಮತ್ತು ನಿರ್ವಹಣೆ
ಪೆಟ್ರೋಲ್ ಗಾಡಿಯ ಆರಂಭಿಕ ಬೆಲೆ ಸಾಮಾನ್ಯವಾಗಿ ಕಡಿಮೆ. ಆದರೆ ಇಂಧನ ವೆಚ್ಚ ಮತ್ತು ನಿಯಮಿತ ಸರ್ವೀಸ್ ಖರ್ಚು ದೀರ್ಘಾವಧಿಯಲ್ಲಿ ಹೆಚ್ಚಾಗುತ್ತದೆ.
EV ಗಾಡಿಗಳು ಖರೀದಿಯಲ್ಲಿ ಸ್ವಲ್ಪ ದುಬಾರಿಯಾದರೂ, ಚಾರ್ಜಿಂಗ್ ವೆಚ್ಚ ಕಡಿಮೆ ಮತ್ತು ಎಂಜಿನ್ ಭಾಗಗಳು ಕಡಿಮೆ ಇರುವುದರಿಂದ ನಿರ್ವಹಣೆ ಸುಲಭ.
ಮೈಲೇಜ್ ಮತ್ತು ಬಳಕೆ
ದೀರ್ಘ ಪ್ರಯಾಣ, ಹೈವೇ ಡ್ರೈವ್‌ಗಳಿಗೆ ಪೆಟ್ರೋಲ್ ಗಾಡಿಗಳು ಇನ್ನೂ ಅನುಕೂಲಕರ.
EV ಗಾಡಿಗಳು ನಗರ ಸಂಚಾರಕ್ಕೆ ಹೆಚ್ಚು ಸೂಕ್ತ. ಶಾಂತ ಚಾಲನೆ, ಸುಗಮ ಅಕ್ಸಿಲರೇಷನ್ ಮತ್ತು ಕಡಿಮೆ ಖರ್ಚು ಇದರ ಲಾಭ.
ಪರಿಸರದ ಮೇಲೆ ಪರಿಣಾಮ
ಪೆಟ್ರೋಲ್ ಗಾಡಿಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತವೆ.
EV ಗಾಡಿಗಳು ನೇರವಾಗಿ ಹೊಗೆ ಬಿಡುವುದಿಲ್ಲ, ಆದ್ದರಿಂದ ಪರಿಸರ ಸ್ನೇಹಿ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
ಸೌಕರ್ಯ ಮತ್ತು ಇನ್‌ಫ್ರಾಸ್ಟ್ರಕ್ಚರ್
ಪೆಟ್ರೋಲ್ ಬಂಕ್‌ಗಳು ಎಲ್ಲೆಲ್ಲೂ ಲಭ್ಯ.
EV ಚಾರ್ಜಿಂಗ್ ಸ್ಟೇಷನ್‌ಗಳು ಇನ್ನೂ ವಿಸ್ತರಣೆಯ ಹಂತದಲ್ಲಿವೆ, ಆದರೆ ನಗರಗಳಲ್ಲಿ ವೇಗವಾಗಿ ಹೆಚ್ಚುತ್ತಿವೆ.
ಕೊನೆಯದಾಗಿ ದೈನಂದಿನ ನಗರ ಬಳಕೆ, ಕಡಿಮೆ ಟ್ರಾವೆಲ್ ಮತ್ತು ಪರಿಸರ ಕಾಳಜಿ ಇದ್ದರೆ EV ಉತ್ತಮ ಆಯ್ಕೆ. ದೀರ್ಘ ಪ್ರಯಾಣ, ತಕ್ಷಣ ಇಂಧನ ಲಭ್ಯತೆ ಮತ್ತು ಕಡಿಮೆ ಆರಂಭಿಕ ವೆಚ್ಚ ಬೇಕಾದರೆ ಪೆಟ್ರೋಲ್ ಗಾಡಿ ಇನ್ನೂ ಪ್ರಾಯೋಗಿಕ. ಭವಿಷ್ಯ ನಿಧಾನವಾಗಿ EV ಕಡೆಗೆ ಸಾಗುತ್ತಿದೆ, ಆದರೆ ಇಂದು ಯಾವುದು ಉತ್ತಮ ಎಂಬುದು ನಿಮ್ಮ ಅಗತ್ಯದ ಮೇಲೆ ನಿಂತಿದೆ.


