Monday, October 20, 2025

BREAKING| ಬಾಲಿವುಡ್​​ನ ಖ್ಯಾತ ಹಿರಿಯ ನಟ ಗೋವರ್ಧನ್ ಅಸ್ರಾನಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಮತ್ತು ನಿರ್ದೇಶಕ ಗೋವರ್ಧನ್ ಅಸ್ರಾನಿ ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ.

ಅವರಿಗೆ 84 ವರ್ಷ ವಯಸ್ಸಾಗಿತ್ತು. ನಟ ಅಸ್ರಾನಿ ಇಂದು ಸಂಜೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ತಮ್ಮ ಅಭಿಮಾನಿಗಳಿಗೆ ಇನ್​ಸ್ಟಾಗ್ರಾಂನಲ್ಲಿ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

5 ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಅಸ್ರಾನಿ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಾಸ್ಯ ಪಾತ್ರಗಳಿಂದಾಗಿ ಅವರು ಜನಪ್ರಿಯತೆ ಗಳಿಸಿದ್ದರು. 350ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಹಿರಿಯ ಬಾಲಿವುಡ್ ನಟ ಅಸ್ರಾನಿ ಅವರ ಸಾವಿಗೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.

ಬಾಲಿವುಡ್​ನ ಜನಪ್ರಿಯ ಸಿನಿಮಾವಾದ ಶೋಲೆಯಲ್ಲಿ ಜೈಲರ್ ಪಾತ್ರ ಮಾಡಿದ್ದ ಗೋವರ್ಧನ್ ಅಸ್ರಾನಿ ಆ ಸಿನಿಮಾದಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದರು. ಭೂಲ್ ಭುಲೈಯಾ, ಧಮಾಲ್, ಬಂಟಿ ಔರ್ ಬಬ್ಲಿ 2, ಆಲ್ ದಿ ಬೆಸ್ಟ್ ಮತ್ತು ವೆಲ್‌ಕಮ್ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

error: Content is protected !!