Wednesday, October 22, 2025

ಕನ್ನಡದಲ್ಲಿಯೂ ನಟಿಸಿದ್ದ ಬಾಲಿವುಡ್ ಹಿರಿಯ ನಟ ಪಂಕಜ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಬಲು ಜನಪ್ರಿಯ ಧಾರಾವಾಹಿ ಮಹಾಭಾರತದಲ್ಲಿ ಕರ್ಣನ ಪಾತ್ರ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ನಟ ಪಂಕಜ್ ಧೀರ್ ಇಂದು ನಿಧನ ಹೊಂದಿದ್ದಾರೆ.

ಅವರಿಗೆ 68 ವರ್ಷ ವಯಸ್ಸಾಗಿತ್ತು. ಪಂಕಜ್ ಧೀರ್ ಅವರು ಹಲವು ವರ್ಷಗಳಿಂದಲೂ ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದರು. ಇತ್ತೀಚೆಗಷ್ಟೆ ಕ್ಯಾನ್ಸರ್ ಗಾಗಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ನಿಧನ ಹೊಂದಿದ್ದಾರೆ.

ಪಂಕಜ್ ಅವರು ಹಿಂದಿಯ ಹಲವಾರು ಜನಪ್ರಿಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ವಿಷ್ಣುವರ್ಧನ್ ಜೊತೆಗೆ ಎರಡು ಕನ್ನಡ ಸಿನಿಮಾಗಳಲ್ಲಿಯೂ ಸಹ ಪಂಜಕ್ ನಟಿಸಿದ್ದಾರೆ. ವಿಷ್ಣುವರ್ಧನ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದ ‘ವಿಷ್ಣು-ವಿಜಯ’ ಸಿನಿಮಾನಲ್ಲಿ ಪಂಕಜ್ ಧೀರ್ ಅವರು ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ 2005 ರಲ್ಲಿ ಬಿಡುಗಡೆ ಆದ ‘ವಿಷ್ಣುಸೇನ’ ಸಿನಿಮಾನಲ್ಲಿಯೂ ಸಹ ಡಿಸಿಪಿ ಸಮರ್ಜೀತ್ ಸಿಂಗ್ ಪಾತ್ರದಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ ‘ಬರ’ ಸಿನಿಮಾನಲ್ಲಿಯೂ ಪಂಕಜ್ ನಟಿಸಿದ್ದಾರೆ.

ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಹಿರಿಯ ನಟನ ನಿಧನದಿಂದ ಅತೀವ ದುಃಖದಲ್ಲಿದೆ.

error: Content is protected !!