ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ನೌಕಾದಳದ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಸಮೀರ್ ಸಕ್ಸೇನಾ (AVSM, NM) ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಅವರು ಸುಮಾರು ನಾಲ್ಕು ದಶಕಗಳ ಶ್ರೇಷ್ಠ ಸೇವೆಯ ಬಳಿಕ ನಿವೃತ್ತರಾಗಿರುವ ವೈಸ್ ಅಡ್ಮಿರಲ್ ವಿ. ಶ್ರೀನಿವಾಸ್ (PVSM, CAVSM, NM) ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಕ್ಷಣಾ ಇಲಾಖೆಯ ವಕ್ತಾರರ ಮಾಹಿತಿ ಪ್ರಕಾರ, ಅಧಿಕಾರ ಸ್ವೀಕರಿಸಿದ ನಂತರ ಇಬ್ಬರು ಹಿರಿಯ ಅಧಿಕಾರಿಗಳು ಕೊಚ್ಚಿಯ ನೌಕಾ ನೆಲೆಯಲ್ಲಿ ಇರುವ ದಕ್ಷಿಣ ನೌಕಾದಳದ ಯುದ್ಧ ಸ್ಮಾರಕದಲ್ಲಿ ರಾಷ್ಟ್ರಸೇವೆಯಲ್ಲಿ ಶಹೀದರಾದ ವೀರರಿಗೆ ಗೌರವ ನಮನ ಸಲ್ಲಿಸಿದರು.

