March 14, 2026
Saturday, March 14, 2026
spot_img

8 ವರ್ಷಗಳ ಹೋರಾಟದಲ್ಲಿ ಗೆಲುವು: ಹಾರ ಉತ್ಪನ್ನಗಳಲ್ಲಿ ORS ಲೇಬಲ್ ಬಳಕೆ ನಿಷೇಧ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಳೆದ 8 ವರ್ಷಗಳಿಂದ ಹೈದರಾಬಾದ್ ಮೂಲದ ವೈದ್ಯೆ ನಕಲಿ ಒಆರ್‌ಎಸ್ ಲೇಬಲ್ ಬಳಕೆ ಕುರಿತು ಕಾನೂನು ಹೋರಾಟ ಮಾಡುತ್ತಲೇ ಬಂದಿದೆ. ಇದೀಗ ಕೊನೆಗೂ ಹೋರಾಟಕ್ಕೆ ಗೆಲುವಾಗಿದೆ. ಆಹಾರ ಉತ್ಪನ್ನಗಳಲ್ಲಿ ಪ್ರಮುಖವಾಗಿ ಹಣ್ಣಿನ ಪಾನೀಯ ಮೇಲೆ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡುವುದನ್ನು FSSAI ನಿಷೇಧಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಸೂತ್ರಗಳನ್ನು ಒಳಗೊಂಡ ಪಾನೀಯ ಮಾತ್ರ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡಬಹುದು. ಇನ್ನುಳಿದ ಪಾನೀಯಗಳು ಒಆರ್‌ಎಸ್ ಅಲ್ಲ. ಎಂದು

ವೈದ್ಯೆ ಶಿವರಂಜನಿ ಸಂತೋಷ್ 8 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.ಈ ಕುರಿತು ಸಂಭ್ರಮ ಹಂಚಿಕೊಂಡ ಶಿವರಂಜನಿ ಸಂತೋಷ್, ಭಾವುಕರಾಗಿದ್ದರು. ಜನರನ್ನು ತಪ್ಪುದಾರಿಗೆ ಏಳೆಯುವ ಉತ್ಪನ್ನಗಳ ಕುರಿತು ಹೋರಾಟ ಮಾಡುತ್ತಾ ಬಂದಿದ್ದೇನೆ. ಇದರ ನಡುವೆ ಹಲವು ಉತ್ಪನ್ನಗಳು,ಕಂಪನಿಗಳು ನನ್ನ ಹೋರಾಟವೇ ತಪ್ಪು, ಕೇವಲ ಪ್ರಚಾರಕ್ಕಾಗಿ ಎಂದು ಬಿಂಬಿಸುವ ಪ್ರಯತ್ನಗು ನಡೆದಿತ್ತು. ಟೀಕೆ, ವಿರೋಧಗಳನ್ನು ಎದುರಿಸಿತ್ತೇನೆ. ಆದರೆ ಕೊನೆಗೂ ಹೋರಾಟಕ್ಕೆ ಗೆಲುವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

ಹಣ್ಣನಿ ಪಾನೀಯ ಸೇರಿದಂತೆ ಇತರ ಪಾನೀಯಗಳ ಮೇಲೆ ಒಆರ್‌ಎಸ್ ಎಂದು ಲೇಬಲ್ ಹಾಕಿ ಮಾರಾಟ ಮಾಡುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ. ಕಾರಣ ಒರಲ್ ರಿಹೈಡ್ರೇಶನ್ ಸೊಲ್ಯೂಶನ್ (ಒಆರ್‌ಎಸ್ ) ಕಾರ್ಬೋನೇಟೆಟ್ ಸೇರಿದಂತೆ ನಿರ್ದಿಷ್ಠ ಸೂತ್ರಗಳನ್ನು ಒಳಗೊಂಡ ಪಾನೀಯ. ಇದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ಭಾರತದಲ್ಲಿ ಹಲವು ಆಹಾರ ಉತ್ಪನ್ನ ಪಾನೀಯಗಳ ಮೇಲೂ ಒಆರ್‌ಎಸ್ ದಾಖಲಿಸಿ ಮಾರಾಟ ಮಾಡಲಾಗುತ್ತಿತ್ತು. ಇನ್ನು ಮುಂದೆ ಇದು ಸಾಧ್ಯವಿಲ್ಲ. ಈ ಕುರಿತು FSSAI ಸ್ಪಷ್ಟ ನಿರ್ದೇಶನ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಸೂತ್ರದ ಪ್ರಕಾರ ಸರಿಯಾದ ಪ್ರಮಾಣದ ಸಕ್ಕರೆ, ಉಪ್ಪು ನೀರಿನ ಪ್ರಮಾಣ ಸೇರಿಸಬೇಕು. ಈ ಸೂತ್ರ ಪಾಲಿಸದ ಪಾನೀಯಗಳು ಯಾವುದೇ ಕಾರಣಕ್ಕೂ ಒಆರ್‌ಎಸ್ ಎಂದು ಲೇಬಲ್ ಹಾಕಲು ಸಾಧ್ಯವಿಲ್ಲ. ಈ ಉತ್ಪನ್ನಗಳು ಮಾರಾಟಕ್ಕೂ ಅವಕಾಶವಿಲ್ಲ ಎಂದು FSSAI ಆದೇಶದಲ್ಲಿ ಸೂಚಿಸಿದೆ. ಅಕ್ಟೋಬರ್ 14ರಂದು FSSAI ಆದೇಶ ಹೊರಡಿಸಿದೆ.

ಒಆರ್‌ಎಸ್ ಬದಲು ತಮ್ಮ ಪಾನೀಯದಲ್ಲಿರುವ ಸೂತ್ರಗಳು, ಅಂಶಗಳನ್ನು ಆಧರಿಸಿ ಎನರ್ಜಿ ಡ್ರಿಂಕ್, ಹೈಡ್ರೇಶನ್ ಡ್ರಿಂಕ್, ಎಲೆಕ್ಟ್ರೋಲೈಟ್ ಡ್ರಿಂಕ್ ಎಂದು ಹೆಸರಿಸಲು ಸೂಚಿಸಿದೆ. ಗ್ರಾಹಕರನ್ನು ತಪ್ಪು ದಾರಿಗೆ ಏಳೆಯವ, ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆಯನ್ನು FSSAI ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !