ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರವು ಪ್ರೇಕ್ಷಕರ ಹೃದಯ ಗೆದ್ದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಚಿತ್ರದ ಯಶಸ್ಸಿನ ಸಂಭ್ರಮವನ್ನು ತಂಡ ಆಯೋಜಿಸಿದ ಸಂದರ್ಭದಲ್ಲಿ, ನಟಿ ರಶ್ಮಿಕಾ ಮತ್ತು ಅವರ ಬಹಳ ಕಾಲದ ಗೆಳೆಯ ಎಂದೇ ಹೇಳಲಾಗುತ್ತಿರುವ ವಿಜಯ್ ದೇವರಕೊಂಡ ಭಾಗವಹಿಸಿದ್ದರು. ಸಕ್ಸಸ್ ಮೀಟ್‌ನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ವೇದಿಕೆಯ ಮೇಲೆ ನಿಂತ ವಿಜಯ್ ದೇವರಕೊಂಡ, ರಶ್ಮಿಕಾ ಮಾಡಿರುವ ಚಿತ್ರದ ಬಗ್ಗೆ ಹೊಗಳುತ್ತಾ, “ಈ ಸಿನಿಮಾ ಕೇವಲ ಸಿನಿಮಾವಾಗಿಲ್ಲ, ಒಂದು ಉದ್ದೇಶ. ಇತರರಿಗೆ ಶಕ್ತಿ ನೀಡುವ ಕಥೆಯನ್ನು ನೀವು ತೆರೆಗೆ ತಂದಿರುವುದಕ್ಕೆ ಹೆಮ್ಮೆ” ಎಂದು ಹೇಳಿದ್ದಾರೆ. ಈ ವೇಳೆ ನಟಿಯ ಕೈಗೆ ನಿಜವಾದ ಸೌಜನ್ಯದ ಸೂಚನೆಯಂತೆ ಮುತ್ತಿಕ್ಕಿದ ದೃಶ್ಯ ಕ್ಷಣಾರ್ಧದಲ್ಲಿ ವೈರಲ್ ಆಗಿ, ನೆಟ್ಟಿಗರಿಂದ ಹಾರ್ಟ್ ಎಮೋಜಿಗಳ ಮಳೆ ಸುರಿದಿದೆ.
ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾವುಕರಾಗಿದ್ದು, “ಚಿತ್ರದಲ್ಲಿ ತೋರಿಸಿರುವ ಕೆಲವು ಘಟನೆಗಳು ನನ್ನ ಜೀವನದಲ್ಲೂ ನಡೆದಿವೆ” ಎಂದು ಹೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಟಾಕ್ಸಿಕ್ ರಿಲೇಷನ್‌ಶಿಪ್ ಕುರಿತ ಈ ಚಿತ್ರದ ವಿಷಯಕ್ಕೆ ನಟಿಯ ಈ ಹೇಳಿಕೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ರಶ್ಮಿಕಾ ಹಿಂದಿನ ರಿಲೇಷನ್‌ಶಿಪ್ ಟಾಕ್ಸಿಕ್ ಆಗಿತ್ತ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

