Wednesday, January 14, 2026
Wednesday, January 14, 2026
spot_img

ವಿಜಯ ಹಝಾರೆ ಟ್ರೋಫಿ: ಸೆಮಿಫೈನಲ್ ಸಮರಕ್ಕೆ ವೇದಿಕೆ ಸಿದ್ಧ; ಫೈನಲ್ ಮೇಲೆ ಕರ್ನಾಟಕದ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ ‘ವಿಜಯ ಹಝಾರೆ ಟ್ರೋಫಿ’ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. 32 ತಂಡಗಳ ನಡುವೆ ನಡೆದ ಭರ್ಜರಿ ಪೈಪೋಟಿಯ ಬಳಿಕ ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಈ ನಿರ್ಣಾಯಕ ಪಂದ್ಯಗಳಿಗೆ ಉದ್ಯಾನ ನಗರಿ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನವು ಸಾಕ್ಷಿಯಾಗಲಿದೆ.

ಟೂರ್ನಿಯ ನಾಲ್ಕು ಶ್ರೇಷ್ಠ ತಂಡಗಳಾದ ಕರ್ನಾಟಕ, ವಿದರ್ಭ, ಪಂಜಾಬ್ ಮತ್ತು ಸೌರಾಷ್ಟ್ರ ಪ್ರಶಸ್ತಿಗಾಗಿ ಕಾದಾಡಲಿವೆ.

ಮೊದಲ ಸೆಮಿಫೈನಲ್ (ಜ. 15): ಮೊದಲ ಸುತ್ತಿನಲ್ಲಿ ಅತಿಥೇಯ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿವೆ. ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡಕ್ಕೆ ತವರಿನ ಬೆಂಬಲವಿರುವುದು ಪ್ಲಸ್ ಪಾಯಿಂಟ್.

ಎರಡನೇ ಸೆಮಿಫೈನಲ್ (ಜ. 16): ಬಲಿಷ್ಠ ಪಂಜಾಬ್ ಮತ್ತು ಸೌರಾಷ್ಟ್ರ ತಂಡಗಳ ನಡುವೆ ಎರಡನೇ ಕದನ ನಡೆಯಲಿದೆ.

ಪಂದ್ಯದ ಸಮಯ: ಈ ಎರಡೂ ಪಂದ್ಯಗಳು ಬೆಳಿಗ್ಗೆ 9:00 ಗಂಟೆಗೆ ಆರಂಭವಾಗಲಿವೆ.

ಸೆಮಿಫೈನಲ್ ಹಂತದಲ್ಲಿ ಜಯಭೇರಿ ಬಾರಿಸುವ ಎರಡು ತಂಡಗಳು ಜನವರಿ 18 ರಂದು ನಡೆಯಲಿರುವ ಮಹಾ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಪಂದ್ಯವೂ ಕೂಡ ಬೆಂಗಳೂರಿನಲ್ಲೇ ನಡೆಯಲಿರುವುದು ವಿಶೇಷ.

Most Read

error: Content is protected !!