Sunday, December 21, 2025

ಲಂಡನ್‌ನಲ್ಲಿ ವಿಜಯ್‌ ಮಲ್ಯ 70ನೇ ಬರ್ತ್‌ಡೇ ಸಂಭ್ರಮ: ಅದ್ದೂರಿ ಪಾರ್ಟಿ ಕೊಟ್ಟ ಲಲಿತ್ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶ ಬಿಟ್ಟು ಪರಾರಿಯಾಗಿ ವಿದೇಶದಲ್ಲಿ ಒಂಟಿಯಾಗಿ ನೆಲೆಸಿರುವ ವಿಜಯ್ ಮಲ್ಯಗೆ ಅವರ ಆತ್ಮೀಯ ಗೆಳೆಯ ಲಲಿತ್ ಮೋದಿ ಲಂಡನ್‌ನಲ್ಲಿ ಬರ್ತ್‌ಡೇಗೂ ಮೊದಲು ಅದ್ದೂರಿಯಾಗಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗಿಯಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಅಧ್ಯಕ್ಷರಾಗಿದ್ದ ಲಲಿತ್ ಮೋದಿ ಲಂಡನ್‌ಗೆ ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಲಂಡನ್‌ನಲ್ಲಿ ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದಾರೆ. ಬೆಲ್‌ಗ್ರೇವ್ ಸ್ಕ್ವೇರ್‌ನಲ್ಲಿರುವ ಲಲಿತ್ ಮೋದಿ ಅವರ ನಿವಾಸದಲ್ಲಿಯೇ ಈ ಪಾರ್ಟಿ ಆಯೋಜಿಸಲಾಗಿತ್ತು.

ಈ ಬರ್ತ್‌ಡೇ ಪಾರ್ಟಿಯಲ್ಲಿ ಖ್ಯಾತ ಛಾಯಾಗ್ರಾಹಕ ಜಿಮ್ ರೈಡೆಲ್ ಕೂಡ ಭಾಗಿಯಾಗಿದ್ದರು. ಅವರು ಲಲಿತ್ ಮೋದಿ ಮತ್ತು ಮಲ್ಯ ಅವರ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲಲಿತ್ ಮೋದಿ ಅವರ ಸುಂದರವಾದ ಲಂಡನ್ ಮನೆಯಲ್ಲಿ ನಿನ್ನೆ ರಾತ್ರಿ ವಿಜಯ್ ಮಲ್ಯ ಅವರ ಗೌರವಾರ್ಥವಾಗಿ ಅವರ 70 ನೇ ಹುಟ್ಟುಹಬ್ಬಕ್ಕೂ ಮೊದಲು ಅದ್ಭುತ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದಕ್ಕಾಗಿ ಲಲಿತ್ ಕೆ ಮೋದಿ ಅವರಿಗೆ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ. ಇದಕ್ಕೆ ಲಲಿತ್ ಮೋದಿಯವರು ಪ್ರತಿಕ್ರಿಯಿಸಿದ್ದು, ನನ್ನ ಮನೆಯಲ್ಲಿ ಆಯೋಜಿಸಿದ್ದ ವಿಜಯ್ ಮಲ್ಯ ಅವರ ಬರ್ತ್‌ಡೇ ಪೂರ್ವ ಪಾರ್ಟಿಗೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ಫೊಟೋಗ್ರಾಫರ್ ಜಿಮ್ ರೈಡೆಲ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಅವರು ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಕೂಡ ಹಂಚಿಕೊಂಡಿದ್ದು, ಆಮಂತ್ರಣ ಪತ್ರದಲ್ಲಿ ರಿಮಾ (ಬೌರಿ) ಮತ್ತು ಲಲಿತ್ ತಮ್ಮ ಆತ್ಮೀಯ ಸ್ನೇಹಿತ ವಿಜಯ್ ಮಲ್ಯ ಅವರ ಗೌರವಾರ್ಥವಾಗಿ ಒಂದು ಮನಮೋಹಕ ಸಂಜೆಗೆ ನಿಮ್ಮನ್ನು ಆಹ್ವಾನಿಸುತ್ತಾರೆ, ಕಿಂಗ್ ಆಫ್ ಗುಡ್‌ಟೈಮ್ಸ್‌ನ್ನು ಸಂಭ್ರಮಿಸುತ್ತಿದ್ದೇಬೆ ಎಂದು ಬರೆಯಲಾಗಿದೆ.

error: Content is protected !!