ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯದಶಮಿ ಹಬ್ಬವು ದುಷ್ಟತನ ಮತ್ತು ಸುಳ್ಳಿನ ಮೇಲೆ ಸತ್ಯ ಹಾಗೂ ಒಳಿತಿನ ವಿಜಯವನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಕ್ಸ್ ಮೂಲಕ ದೇಶದ ಜನತೆಗೆ ಶುಭಾಶಯ ಕೋರಿದ ಅವರು, ಈ ಪವಿತ್ರ ದಿನ ಎಲ್ಲರಿಗೂ ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿಯ ಹಾದಿಯಲ್ಲಿ ಸಾಗಲು ಪ್ರೇರಣೆಯಾಗಲಿ ಎಂದು ಹೇಳಿದ್ದಾರೆ.
ಇಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಮಹಾತ್ಮ ಗಾಂಧಿಯವರನ್ನು ಸ್ಮರಿಸಿದರು. ಗಾಂಧೀಜಿ ತೋರಿದ ಧೈರ್ಯ, ಸರಳತೆ ಹಾಗೂ ಅಹಿಂಸೆಯ ಮೌಲ್ಯಗಳು ಜನರ ಸಬಲೀಕರಣಕ್ಕೆ ಮಾರ್ಗದರ್ಶಕವಾಗಿದ್ದವು ಎಂದು ಅವರು ಹೇಳಿದರು. “ವಿಕಸಿತ ಭಾರತ ನಿರ್ಮಿಸಲು ಗಾಂಧೀಜಿ ತೋರಿದ ದಾರಿ ನಮ್ಮನ್ನು ಮುನ್ನಡೆಸುತ್ತಿದೆ” ಎಂದು ಮೋದಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದರು.
ಅದೇ ರೀತಿ, ಇಂದು ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಕೂಡ. ಶಾಸ್ತ್ರಿ ಅವರ ನೈತಿಕತೆ, ನಮ್ರತೆ ಮತ್ತು ದೃಢಸಂಕಲ್ಪವು ಸವಾಲಿನ ಸಮಯದಲ್ಲಿ ದೇಶವನ್ನು ಬಲಪಡಿಸಿತು ಎಂದು ಪ್ರಧಾನಿ ಮೋದಿ ಸ್ಮರಿಸಿದರು. ‘ಜೈ ಜವಾನ್, ಜೈ ಕಿಸಾನ್’ ಎಂಬ ಅವರ ಘೋಷಣೆ ಜನರಲ್ಲಿ ದೇಶಭಕ್ತಿ ಮತ್ತು ತ್ಯಾಗಭಾವನೆ ಉಂಟುಮಾಡಿದೆ ಎಂದು ಬರೆದಿದ್ದಾರೆ.