Tuesday, October 21, 2025

Vinegar | ವಿನೆಗರ್‌ ಅಡುಗೆಯಲ್ಲಿ ಮಾತ್ರ ಬಳಸೋದಲ್ಲ! ಅದರ ಅದ್ಭುತ ಉಪಯೋಗಗಳು ಇಲ್ಲಿವೆ ನೋಡಿ

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ವಿನೆಗರ್ ಕೇವಲ ಆಹಾರದ ರುಚಿ ಹೆಚ್ಚಿಸುವ ಪದಾರ್ಥವಷ್ಟೇ ಅಲ್ಲ, ಅದು ಮನೆ ಮತ್ತು ದೈನಂದಿನ ಜೀವನದ ಹಲವಾರು ಕೆಲಸಗಳಲ್ಲಿ ಸಹ ಉಪಯೋಗವಾಗುತ್ತದೆ. ಇದರ ರಾಸಾಯನಿಕ ಗುಣಗಳಿಂದ ಶುದ್ಧತೆ, ಆರೋಗ್ಯ ಮತ್ತು ಸೌಂದರ್ಯದಲ್ಲಿ ಸಹ ಸಹಾಯ ಪಡೆಯಬಹುದು. ವಿನೆಗರ್ ಖರೀದಿಸುವಾಗ ಕೇವಲ ಅಡುಗೆಗೆ ಮಾತ್ರವಲ್ಲ, ಇತರ ಉಪಯೋಗಗಳಿಗೂ ಬಳಸಲು ಎರಡು ಪ್ಯಾಕೇಟ್‌ಗಳನ್ನು ಖರೀದಿಸುವುದು ಉತ್ತಮ.

  • ಬಹುಪಯೋಗಿ ಕ್ಲೀನರ್: ವಿನೆಗರ್ ರಾಸಾಯನಿಕ ಕ್ಲೀನರ್ಗಳಿಗೆ ನೈಸರ್ಗಿಕ ಪರ್ಯಾಯವಾಗಿದೆ. ಇದು ಗ್ರೀಸ್‌, ಕಲೆಗಳು ಮತ್ತು ಸೋಪ್‌ನ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಸಮಾನ ಪ್ರಮಾಣದ ನೀರು ಮತ್ತು ವಿನೆಗರ್ ಮಿಶ್ರಣ ಮಾಡಿ ಅಡುಗೆ ಮನೆ, ಬಾತ್ರೂಮ್ ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಬಹುದು.
  • ವಾಸನೆ ಹೋಗಲಾಡಿಸುವುದು: ಅಡುಗೆಮನೆ ಅಥವಾ ಫ್ರಿಜ್‌ನಲ್ಲಿ ಬರುವ ಕೆಟ್ಟ ವಾಸನೆಗಳನ್ನು ನಿವಾರಿಸಲು ವಿನೆಗರ್ ಅತ್ಯುತ್ತಮ ಆಯ್ಕೆ. ರಾತ್ರಿ ಒಂದು ಬೌಲ್‌ನಲ್ಲಿ ವಿನೆಗರ್ ಇಟ್ಟುಬಿಟ್ಟರೆ, ಬೆಳಗ್ಗೆ ಅಷ್ಟೊತ್ತಿಗೆ ವಾಸನೆಗಳು ಮಾಯವಾಗಿರುತ್ತೆ. ಬೆವರಿನ ವಾಸನೆಯ ಬಟ್ಟೆಗಳಿಗೂ ಇದು ಪ್ರಯೋಜನಕಾರಿಯಾಗಿದೆ.
  • ಬಟ್ಟೆಗಳಿಗೆ ಸಾಫ್ಟ್ನರ್: ಲಾಂಡ್ರಿಯಲ್ಲಿ ಡಿಟರ್ಜೆಂಟ್‌ಗಳ ಅವಶೇಷಗಳು ಉಳಿಯದಂತೆ ಮಾಡಲು ಹಾಗೂ ಬಟ್ಟೆಗಳನ್ನು ಮೃದುಗೊಳಿಸಲು ವಿನೆಗರ್ ಸಹಾಯಕ. ಚಳಿಗಾಲದಲ್ಲಿ ಬಟ್ಟೆಗಳು ಕಠಿಣವಾಗದಂತೆ ತಡೆಯುತ್ತದೆ ಮತ್ತು ಚರ್ಮಕ್ಕೆ ಹಾನಿ ಆಗುವುದಿಲ್ಲ.
  • ತೋಟದ ಆರೈಕೆ: ತೋಟದಲ್ಲಿನ ಅನಗತ್ಯ ಗಿಡಗಳನ್ನು ತೆಗೆದುಹಾಕಲು ವಿನೆಗರ್ ನೈಸರ್ಗಿಕ ಬುಷ್ ಕಿಲ್ಲರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸಾಕುಪ್ರಾಣಿಗಳಿಗೆ ಹಾನಿಯಿಲ್ಲದೆ ಕಾರ್ಯನಿರ್ವಹಿಸುವುದರಿಂದ ಸುರಕ್ಷಿತ ಆಯ್ಕೆಯಾಗಿದೆ.
  • ಕೂದಲಿನ ಆರೈಕೆ: ಆಪಲ್ ಸೈಡರ್ ವಿನೆಗರ್ ಶಾಂಪೂ ಬಳಿಕ ಬಳಸಿದರೆ ತಲೆಹೊಟ್ಟು ಕಡಿಮೆಮಾಡಿ, ಕೂದಲಿಗೆ ಹೊಳಪು ತರಲು ಸಹಾಯ ಮಾಡುತ್ತದೆ. ಇದು ತಲೆಚರ್ಮದ pH ಸಮತೋಲನವನ್ನು ಕಾಪಾಡಿ ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಕಾರಿ.
error: Content is protected !!