Sunday, December 21, 2025

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮತ್ತೊಬ್ಬ ಹಿಂದು ವ್ಯಕ್ತಿಯ ಮೇಲೆ ಭೀಕರ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಾಯಕ ಶರೀಫ್ ಒಸ್ಮಾನ್ ಹಾಡಿ ಹತ್ಯೆ ಬೆನ್ನಲ್ಲೇ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ.

ಈ ಹಿಂಸಾಚಾರ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳನ್ನೇ ಟಾರ್ಗೆಟ್ ಮಾಡಿ ನಡೆಸಲಾಗುತ್ತಿದೆ. ಹಿಂದು ದೀಪು ಚಂದ್ರ ದಾಸ್ ಮೇಲೆ ಭೀಕರ ದಾಳಿ ನಡೆದಿತ್ತು.

ಇದೀಗ ಈ ಘಟನೆ ಬನ್ನಲ್ಲೇ ಇದೀಗ ಮತೊಬ್ಬ ಹಿಂದುವಿನ ಮೇಲೆ ಭೀಕರ ದಾಳಿ ನಡೆದಿದೆ. ಹಿಂದು ಇ ರಿಕ್ಷಾ ಚಾಲಕ ಗೋಬಿಂದ ಬಿಸ್ವಾಸ್ ಮೇಲೆ ದಾಳಿಯಾಗಿದೆ.

ದುರಂತ ಅಂದರೆ ಬಾಂಗ್ಲಾದೇಶ ಸೇನೆ, ಪೊಲೀಸರು ಈತನ ಬಂಧಿಸಿ ಜೈಲಿಗಟ್ಟಿದ್ದಾರೆ. ಇಷ್ಟೇ ಅಲ್ಲ ಈತನ ಮಾತು ಕೇಳಲು ಯಾವ ಭದ್ರತಾ ಎಜೆನ್ಸಿ, ಸರ್ಕಾರವೂ ತಯಾರಾಗಿಲ್ಲ.

ಜೆನ್ನೈದಾ ಜಿಲ್ಲೆಯ ಖುಲನಾ ಡಿವಿಶನ್‌ನಲ್ಲಿ ಇ ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿರುವ ಈ ಗೋಬಿಂದ ಬಿಸ್ವಾಸ್ ಮೇಲೆ ಬಾಂಗ್ಲಾದೇಶದ ಬಹುಸಂಖ್ಯಾತ ಪ್ರತಿಭಟನಾ ಗುಂಪು ದಾಳಿ ಮಾಡಿದೆ.

https://x.com/SahidulKhokonbd/status/2002333423017533495?ref_src=twsrc%5Etfw%7Ctwcamp%5Etweetembed%7Ctwterm%5E2002333423017533495%7Ctwgr%5Edb370631a301b26d54544a834b845efa71dea2de%7Ctwcon%5Es1_&ref_url=https%3A%2F%2Fwww.wionews.com%2Fworld%2Fhindu-rickshaw-puller-wearing-red-thread-branded-raw-agent-assaulted-by-mob-in-bangladesh-1766322679454

ಗೋಬಿಂದ ಬಿಸ್ವಾಸ್ ಧರಿಸಿದ್ದ ಉಡುದ್ವಾರ ಕಟ್ಟಿದ್ದು ಮಾತ್ರವಲ್ಲ, ಶರ್ಟ್ ಒಳಗೆ ಹಾಕಿರುವ ಟಿಶರ್ಟ್ ಶಿವನ ಚಿತ್ರ ಹೊಂದಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶದ ಬಹುಸಂಖ್ಯಾ ಪ್ರತಿಭಟನಾ ನಿರತ ಗುಂಪು ಈ ಹಿಂದು ಮೇಲೆ ದಾಳಿ ಮಾಡಿದೆ.

ಗೋಂಬಿದ ಬಿಸ್ವಾಸ್ ಭಾರತದ ಗೂಢಚರ್ಯೆ ಎಂದು ಆರೋಪಿಸಿದ್ದಾರೆ. ಹಿಗ್ಗಾ ಮುಗ್ಗ ಥಳಿಸಿದ್ದರೆ. ದುರಂತ ಎಂದರೆ ಸ್ಥಳಕ್ಕೆ ಪೊಲೀಸರು, ಬಾಂಗ್ಲಾದೇಶ ಸೇನೆ ಬಂದರೂ ಈತನ ಮಾತು ಕೇಳಿಲ್ಲ. ತಾನು ಹಿಂದು. ಇಲ್ಲೇ ಹುಟ್ಟಿ ಬೆಳೆದಿದ್ದೇನೆ. ನನ್ನ ಇಡೀ ಕಟುಂಬ ಇಲ್ಲೇ ಹುಟ್ಟಿ ಬೆಳೆದಿದೆ. ನಾನು ಹಿಂದುವಾಗಿಯೇ ಗುರುತಿಸಿಕೊಂಡಿದ್ದೇನೆ ಎಂದು ಪರಿಪರಿಯಾಗಿ ಹೇಳಿದರೂ ಯಾರೂ ಈತನ ಮಾತು ಕೇಳಲಿಲ್ಲ. ಕೊರಳಪಟ್ಟಿ ಹಿಡಿದು ಗೋಂಬಿದ ಬಿಸ್ವಾಸ್‌ನ ಜೈಲಿಗಟ್ಟಿದ್ದಾರೆ. ಗಾಯಗೊಂಡಿರುವ ಗೋಂಬಿದ ಬಿಸ್ವಾಸ್ ಕುಟುಂಬ ಕಂಗಾಲಾಗಿದೆ.

ಗೋಂಬಿದ ಬಿಸ್ವಾಸ್ ಮೊಬೈಲ್ ಫೋನ್‌ನಲ್ಲಿ ಭಾರತದ ಆಕಾಶ್ ಎಂಬ ವ್ಯಕ್ತಿ ಜೊತೆ ಸಂಪರ್ಕವಿರುವುದು ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈತ ಭಾರತದಲ್ಲೂ ನೆಲೆಸಿದ್ದ. ಹೀಗಾಗಿ ಈತ ಭಾರತದ ರಾ ಎಜೆನ್ಸಿಯ ಗೂಢಚಾರಿ ಎಂದು ಪ್ರಾಥಮಿಕ ತನಿಖೆ ಬಹಿರಂಗಪಡಿಸಿದೆ. ಹೀಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿದ್ದಾರೆ.

error: Content is protected !!