Monday, September 15, 2025

VIRAL | ಪಾಕ್‌ ರಾಷ್ಟ್ರಗೀತೆ ಟೈಮ್‌ನಲ್ಲಿ ಪ್ಲೇ ಆಯ್ತು ಜಲೇಬಿ ಬೇಬಿ ಸಾಂಗ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏಷ್ಯಾಕಪ್​​ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆದವು. ಭಾರತದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಪಾಕಿಸ್ತಾನ, ಒಂದರ ನಂತರ ಒಂದರಂತೆ ಮುಖಭಂಗ ಅನುಭವಿಸಿತು.

ಟೀಂ ಇಂಡಿಯಾದ ಆಟಗಾರರು ಆಟಕ್ಕೂ ಮುನ್ನ, ಆಟದ ಸಮಯದಲ್ಲಿ ಹಾಗೂ ಆಟದ ನಂತರವೂ ಪಾಕ್‌ ಆಟಗಾರರ ಜೊತೆ ಹ್ಯಾಂಡ್‌ ಶೇಕ್‌ ಆಗಲಿ, ಸ್ಮೈಲ್‌ ಆಗಿಲ್ಲ ಎಕ್ಸ್‌ಚೇಂಜ್‌ ಮಾಡಲಿಲ್ಲ.

ಪಂದ್ಯ ಆರಂಭಕ್ಕೂ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆ ಪ್ಲೇ ಆಗುತ್ತದೆ. ಈ ವೇಳೆ ಕೂಡ ಪಾಕ್‌ಗೆ ಅವಮಾನ ಆಗಿದೆ. ಡಿಜೆಯ ಮಿಸ್ಟೇಕ್‌ನಿಂದಾಗಿ ಪಾಕ್‌ ರಾಷ್ಟ್ರಗೀತೆ ಬದಲು ಜಲೇಬಿ ಬೇಬಿ ಹಾಡು ಪ್ಲೇ ಆಗಿದೆ. ಇದರಿಂದ ಪ್ಲೇಯರ್ಸ್‌ ಕಕ್ಕಾಬಿಕ್ಕಿಯಾಗಿ ಒಬ್ಬರನ್ನೊಬ್ಬರು ನೋಡಿಕೊಂಡಿದ್ದಾರೆ. ತಕ್ಷಣವೇ ಹಾಡನ್ನು ಬದಲಾಯಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ