Monday, January 26, 2026
Monday, January 26, 2026
spot_img

Viral | ಒಳಗೆ ಸ್ಪ್ರಿಂಗ್ ಏನಾದ್ರೂ ಉಂಟಾ? ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಆಟದ ದಿಕ್ಕನ್ನೇ ಬದಲಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸಿದ ಅವರು, ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಕ್ರೀಡಾಭಿಮಾನಿಗಳನ್ನು ಅಚ್ಚರಿಗೊಳಿಸಿದರು. ಅಷ್ಟರಲ್ಲೇ ನಿಲ್ಲದೇ, 20 ಬಾಲ್‌ಗಳಲ್ಲಿ 5 ಸಿಕ್ಸರ್‌ಗಳು ಮತ್ತು 7 ಫೋರ್‌ಗಳ ನೆರವಿನಿಂದ ಅಜೇಯ 68 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಅಭಿಷೇಕ್ ಶರ್ಮಾ ಅವರ ಈ ಆರ್ಭಟದಿಂದ ಟೀಂ ಇಂಡಿಯಾ ಕೇವಲ 10 ಓವರ್‌ಗಳಲ್ಲಿ 155 ರನ್‌ಗಳನ್ನು ಚೇಸ್ ಮಾಡಿ, 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವು ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕೆ ವಿಶೇಷ ದಾಖಲೆಯಾಗಿ ಉಳಿಯಿತು.

ಪಂದ್ಯ ನಂತರ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್‌ಗೆ ಬೆಚ್ಚಿಬಿದ್ದ ನ್ಯೂಝಿಲೆಂಡ್ ಆಟಗಾರರಾದ ಮಿಚೆಲ್ ಸ್ಯಾಂಟ್ನರ್, ಡೆವೊನ್ ಕಾನ್ವೆ ಮತ್ತು ಜೇಕಬ್ ಡಫಿ, ಹಾಸ್ಯದ ರೀತಿಯಲ್ಲಿ ಅವರ ಬ್ಯಾಟ್ ಪರಿಶೀಲಿಸಿದರು. “ಇದು ಬ್ಯಾಟಾ, ಅಥವಾ ಒಳಗೆ ಸ್ಪ್ರಿಂಗ್ ಇದೆಯಾ?” ಎಂಬಂತೆ ಕಾಲೆಳೆಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ 20 ಓವರ್‌ಗಳಲ್ಲಿ 153 ರನ್‌ಗಳಿಗೆ ಸೀಮಿತಗೊಂಡಿತ್ತು. ಆದರೆ ಅಭಿಷೇಕ್ ಶರ್ಮಾ ನೇತೃತ್ವದ ಆಕ್ರಮಣದಿಂದ ಭಾರತಕ್ಕೆ ಈ ಗುರಿ ಕೇವಲ ಔಪಚಾರಿಕವಾಗಿಬಿಟ್ಟಿತು.

Must Read