ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಹವಾ ಜೋರಾಗಿದೆ. ಜನವರಿ 15ರಂದು ಒಂದೇ ಹಂತದಲ್ಲಿ ನಡೆಯಲಿರುವ ಚುನಾವಣೆ ಹಾಗೂ 16ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ತಂತ್ರಗಳ ಬಗ್ಗೆ ಚರ್ಚೆ ಜೋರಾಗಿದೆ. ಇದರ ನಡುವೆಯೇ ನೆಟ್ಟಿಗರಿಗೆ ಮನರಂಜನೆ ನೀಡುತ್ತಿರುವುದು ಎಐ ಮೂಲಕ ಸೃಷ್ಟಿಸಲಾದ ವಿಶಿಷ್ಟ ವೀಡಿಯೋಗಳು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋಗಳಲ್ಲಿ ಮಾರ್ವೆಲ್ ಸಿನಿಮಾಗಳ ಜನಪ್ರಿಯ ಪಾತ್ರಗಳು ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವಂತೆ ತೋರಿಸಲಾಗಿದೆ. ಥಾನೋಸ್ ಕಾಂಗ್ರೆಸ್ ಸೇರ್ಪಡೆಯಾದಂತೆ, ಐರನ್ ಮ್ಯಾನ್ ಬಿಜೆಪಿ ಪರವಾಗಿ ಪ್ರಚಾರ ನಡೆಸುವಂತೆ, ಹಲ್ಕ್ ಶಿವಸೇನೆ ಸೇರಿರುವಂತೆ ಎಐ ವೀಡಿಯೋಗಳಲ್ಲಿ ಚಿತ್ರಿಸಲಾಗಿದೆ. ಈ ದೃಶ್ಯಗಳು ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿವೆ.
ಇದನ್ನೂ ಓದಿ: FOOD | ಈ ರೀತಿಯ ಎಗ್ ಬ್ರೆಡ್ ಟೋಸ್ಟ್ ಒಮ್ಮೆ ಟ್ರೈ ಮಾಡಿ! ಎಲ್ಲರಿಗೂ ಖಂಡಿತ ಇಷ್ಟ ಆಗುತ್ತೆ
ಈ ವೀಡಿಯೋಗಳ ಸೃಷ್ಟಿಕರ್ತರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇನ್‌ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಇವು ವ್ಯಾಪಕವಾಗಿ ಹರಡಿವೆ. ನಾಮಪತ್ರ ಸಲ್ಲಿಕೆ, ಚುನಾವಣಾ ರ್ಯಾಲಿ, ಭಾಷಣಗಳನ್ನೂ ಈ ಪಾತ್ರಗಳಿಗೆ ಕಲ್ಪಿಸಲಾಗಿದ್ದು, ಇನ್ನಷ್ಟು ಕುತೂಹಲಕಾರಿಯಾಗಿ ಕೆಲವು ಪಾತ್ರಗಳು ಮರಾಠಿಯಲ್ಲಿ ಮಾತನಾಡುವಂತೆ ತೋರಿಸಲಾಗಿದೆ.
ಈ ಎಐ ವೀಡಿಯೋಗಳು ಲಕ್ಷಾಂತರ ವೀಕ್ಷಣೆ, ಲೈಕ್ ಮತ್ತು ಕಾಮೆಂಟ್‌ಗಳನ್ನು ಪಡೆದು ವೈರಲ್ ಆಗಿವೆ. ರಾಜಕೀಯ ಚರ್ಚೆಗಳ ನಡುವೆಯೇ ಬಿಎಂಸಿ ಚುನಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಸೃಜನಶೀಲತೆ ಮತ್ತು ಮನರಂಜನೆಯ ಹೊಸ ರೂಪ ತಾಳಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

