ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲ್ಯಾಂಡ್‍ನಲ್ಲಿ 13 ವರ್ಷದ ಬಾಲಕ ಇಂಟರ್ನೆಟ್‌ನಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಿಂದ ಹೈ-ಪವರ್ ಅಯಸ್ಕಾಂತಗಳನ್ನು ಖರೀದಿಸಿ ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.
ಆತ 100 ಕ್ಕೂ ಹೆಚ್ಚು ಅಯಸ್ಕಾಂತಗಳನ್ನು ನುಂಗಿದ್ದು , ಸರ್ಜರಿ ಮೂಲಕ 100ಕ್ಕೂ ಹೆಚ್ಚು ಆಯಸ್ಕಾಂತಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
ಜನಪ್ರಿಯ ಆನ್‌ಲೈನ್ ಮಾರುಕಟ್ಟೆಯಾದ ಟೆಮುನಿಂದ ಆರ್ಡರ್ ಮಾಡಿದ್ದ 100ಕ್ಕೂ ಹೆಚ್ಚು ಆಯಸ್ಕಾಂತಗಳನ್ನು ಬಾಲಕ ನುಂಗಿದ್ದ. ಶಸ್ತ್ರಚಿಕಿತ್ಸೆಗೆ ಒಂದು ವಾರದ ಮೊದಲು ಆ ಹದಿಹರೆಯದ ಬಾಲಕ ಸುಮಾರು 80 ರಿಂದ 100 ಸಣ್ಣ ಆಯಸ್ಕಾಂತಗಳನ್ನು ನುಂಗಿದ್ದ ಎಂದು ಟೌರಂಗಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ. ಅವೆಲ್ಲವನ್ನೂ ಬಾಲಕ ಆನ್ಲೈನ್ ಮಾರುಕ್ಟಟೆಯಿಂದ ಖರೀದಿಸಿದ್ದನು.
ನಾಲ್ಕು ದಿನಗಳ ಕಾಲ ಸಾಮಾನ್ಯ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ , ವೈದ್ಯರ ತಂಡ ಬಾಲಕ ಸುಮಾರು ಒಂದು ವಾರದ ಹಿಂದೆ ಸುಮಾರು 80–100 5x2mm ಹೈ-ಪವರ್ (ನಿಯೋಡೈಮಿಯಮ್) ಆಯಸ್ಕಾಂತಗಳನ್ನು ಸೇವಿಸಿದ್ದಾಗಿ ಬಹಿರಂಗಪಡಿಸಿದ್ದಾನೆ.
ಈ ಅಯಸ್ಕಾಂತಗಳನ್ನು ದೇಶೀಯ ಅಥವಾ ವೈಯಕ್ತಿಕ ಬಳಕೆಗಾಗಿ ಮಾರಾಟ ಮಾಡುವುದನ್ನು ನ್ಯೂಜಿಲೆಂಡ್ ಕಾನೂನಿನಿಂದ ನಿಷೇಧಿಸಲಾಗಿದ್ದರೂ, ಶಿಕ್ಷಣ ಸಂಸ್ಥೆಗಳು ಅವುಗಳನ್ನು ಬೋಧನಾ ಉದ್ದೇಶಗಳಿಗಾಗಿ ಅಥವಾ ಇತರ ಉತ್ಪನ್ನಗಳಲ್ಲಿ ಬಳಸುವುದಕ್ಕಾಗಿ ಇನ್ನೂ ಅನುಮತಿ ಇದೆ. ಈ ಅಯಸ್ಕಾಂತಗಳನ್ನು ಮಕ್ಕಳ ಸ್ನೇಹಿ ಆಟಿಕೆಗಳಾಗಿ ಪ್ರಚಾರ ಮಾಡಲಾಗಿದೆ ಮತ್ತು ಫಿಡ್ಜೆಟ್ ಆಟಿಕೆಗಳಾಗಿ ಅಥವಾ ವಿವಿಧ ಆಕಾರಗಳನ್ನು ರಚಿಸಲು ಬಳಸಬಹುದಾದ ಸೆಟ್‌ಗಳಲ್ಲಿ ಬರುತ್ತವೆ.ಅವು ಹೆಚ್ಚಾಗಿ ಪ್ರಕಾಶಮಾನವಾದ ಸಣ್ಣ ಚೆಂಡುಗಳ ರೂಪದಲ್ಲಿರುತ್ತವೆ. ನೋಡಲು ಆಕರ್ಷಕವಾಗಿರುವುದರಿಂದ ಮಕ್ಕಳು ಸುಲಭವಾಗಿ ನುಂಗಿಬಿಡುತ್ತಾರೆ.
ವಾಸ್ತವವಾಗಿ, ಸಣ್ಣವಿರುವ ಹಾಗೂ ಹೆಚ್ಚಿನ ಶಕ್ತಿಯ ಅಯಸ್ಕಾಂತಗಳು ತುಂಬಾ ಅಪಾಯಕಾರಿಯಾಗಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನಲ್ಲಿ ಅವುಗಳನ್ನು ಮಾರಾಟ ಮಾಡಲು ನಿಷೇಧಿಸಲಾಗಿದೆ ಎಂದು ಆಕ್ಲೆಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲೆಕ್ಸ್ ಸಿಮ್ಸ್ ಹೇಳಿದರು.
ಮಕ್ಕಳು ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಕಡಿಮೆ ಬೆಲೆಗೆ ಅಯಸ್ಕಾಂತಗಳನ್ನು ಪಡೆಯಬಹುದಾಗಿದೆ. ಹೀಗಾಗಿ ಈ ಘಟನೆಯು ಬಹಳ ಆತಂಕಕಾರಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

