Friday, January 9, 2026

Viral | ಅಡ್ಡಬಂದ ಡೆಲಿವರಿ ಬಾಯ್ ಮೇಲೆ ಮನಬಂದಂತೆ ಹಲ್ಲೆ: ಬೈಕ್​​ ಸವಾರರಿಗೆ ಬಿತ್ತು ಫ್ರೀ ಗೂಸಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಬೆಂಗಳೂರಿನ ಮಹದೇವಪುರದಲ್ಲಿ ನಡೆದ ರಸ್ತೆ ಗಲಾಟೆಗೆ ಸಾಕ್ಷಿಯಾಗಿದೆ. ಕ್ಷುಲ್ಲಕ ಕಾರಣದಿಂದ ಆರಂಭವಾದ ಈ ಘಟನೆ, ಕ್ಷಣಾರ್ಧದಲ್ಲೇ ಹಲ್ಲೆಯಾಗಿ ಮಾರ್ಪಟ್ಟಿದೆ.

ಮಾಹಿತಿ ಪ್ರಕಾರ, ಡೆಲಿವರಿ ಬಾಯ್ ಅಚಾನಕ್ ಅಡ್ಡಬಂದ ಕಾರಣ ಬೈಕ್ ಸವಾರರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಸವಾರರು ಯಾವುದೇ ಮಾತುಕತೆ ಇಲ್ಲದೇ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ನಡೆದ ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: FOOD | ಕರುಮ್ ಕುರುಮ್ ರವೆ ಚಕ್ಕುಲಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ!

ಡೆಲಿವರಿ ಬಾಯ್‌ನ ಅಳಲು ಕೇಳಿದ ಸ್ಥಳೀಯರು ಮಧ್ಯಪ್ರವೇಶಿಸಿ ಸವಾರರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಅವರು ಹಲ್ಲೆಯನ್ನು ಮುಂದುವರಿಸಿದ್ದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೈಕ್ ಸವಾರರಿಗೆ ತಕ್ಕ ಪಾಠ ಕಲಿಸಿದ್ದಾರೆ. ಪರಿಸ್ಥಿತಿ ಕೈಮೀರಲಿರುವುದನ್ನು ಗಮನಿಸಿದ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಜನವರಿ 4ರ ರಾತ್ರಿ ನಡೆದ ಈ ಘಟನೆ ಇತ್ತೀಚೆಗೆ ಸಾರ್ವಜನಿಕ ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

error: Content is protected !!