Monday, January 12, 2026

Viral | ಆಕಾಶದಿಂದ ಸಾವಿನ ಬಾಗಿಲು ತಟ್ಟಿದ ಸ್ಕೈ ಡೈವರ್: 15,000 ಅಡಿ ಎತ್ತರದಲ್ಲಿ ನಡೆದ ರೋಚಕ ಪವಾಡ!

ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವ ಮುನ್ನ ನೂರಾರು ಬಾರಿ ಯೋಚಿಸುವುದು ಜಾಣತನ. ಅದರಲ್ಲೂ ಸ್ಕೈ ಡೈವಿಂಗ್‌ನಂತಹ ಪ್ರಾಣಾಂತಿಕ ಕ್ರೀಡೆಯಲ್ಲಿ ಸಣ್ಣ ಲೋಪವಾದರೂ ಜೀವಕ್ಕೆ ಕುತ್ತು ಎನ್ನುವುದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದ ಈ ಘಟನೆ ಸಾಕ್ಷಿ.

ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದ ಕೈರ್ನ್ಸ್‌ನ ದಕ್ಷಿಣ ಭಾಗದಲ್ಲಿ ನಡೆದ ಸಾಹಸ ಪ್ರದರ್ಶನದ ಸಮಯದಲ್ಲಿ ಈ ನಂಬಲಸಾಧ್ಯ ಘಟನೆ ನಡೆದಿದೆ. ಸುಮಾರು 15,000 ಅಡಿಗಳ ಎತ್ತರದಿಂದ ಡೈವ್ ಮಾಡಲು ಸಿದ್ಧರಾಗಿದ್ದ ಹಲವು ಮಂದಿ ಸಾಹಸಿಗಳು ವಿಮಾನದಿಂದ ಕೆಳಗೆ ಜಿಗಿಯಲು ಮುಂದಾದರು. ಈ ಸಂದರ್ಭದಲ್ಲಿ ಭಾರೀ ಗಾಳಿಯ ಒತ್ತಡದ ಕಾರಣ, ಡೈವರ್‌ಗಳು ಯೋಜಿಸಿದಂತೆ ಹಾರುವ ಬದಲು, ನೇರವಾಗಿ ಕೆಳಗೆ ಬೀಳತೊಡಗಿದರು.

ಪ್ಯಾರಾಚೂಟ್ ತೆರೆಯಲು ಪ್ರಯತ್ನಿಸಿದಾಗ ಅದು ಹೇಗೋ ತೆರೆದುಕೊಂಡು, ಡೈವರ್‌ನ ನಿಯಂತ್ರಣ ತಪ್ಪಿ ವಿಮಾನದ ರೆಕ್ಕೆಯಲ್ಲಿ ಸಿಲುಕಿಕೊಂಡಿತು! ಆತ ರೆಕ್ಕೆಗೆ ಸಿಲುಕಿಕೊಂಡ ಪ್ಯಾರಾಚೂಟ್‌ ಅನ್ನು ಹಿಡಿದು ಆಕಾಶದಲ್ಲಿ ನೇತಾಡುತ್ತಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ, ಆ ಪ್ಯಾರಾಚೂಟ್ ಕೂಡ ತುಂಡಾಯಿತು! ಡೈವರ್ ಕೆಳಗೆ ಬಿದ್ದೇ ಬಿಡುತ್ತಾರೆ ಎಂದು ಎಲ್ಲರೂ ಭಾವಿಸುವಷ್ಟರಲ್ಲಿ, ಕ್ಷಣಾರ್ಧದಲ್ಲಿ ಡೈವರ್ ಬಳಿಯಿದ್ದ ಬ್ಯಾಕಪ್ ಪ್ಯಾರಾಚೂಟ್ ಯಶಸ್ವಿಯಾಗಿ ತೆರೆದುಕೊಂಡಿತು. ಈ ಪವಾಡ ಸದೃಶ ಬೆಳವಣಿಗೆಯಿಂದಾಗಿ, ಆ ವ್ಯಕ್ತಿ ಯಾವುದೇ ಗಂಭೀರ ಅಪಾಯವಿಲ್ಲದೆ ಸುರಕ್ಷಿತವಾಗಿ ಭೂಮಿಗೆ ಇಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯು ಸ್ಕೈ ಡೈವಿಂಗ್‌ನಂತಹ ಸಾಹಸಗಳ ಅಪಾಯವನ್ನು ಮತ್ತೊಮ್ಮೆ ನೆನಪಿಸಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!