ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಡ್ ಮಧ್ಯದಲ್ಲಿ ಕೆಲ ಯುವಕರು ನಡೆಸಿದ ಅಪಾಯಕಾರಿ ಬೈಕ್ ಸಾಹಸವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜನಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಮೋಟಾರ್ ಸೈಕಲ್ ಮೇಲೆ ನಿಂತು, ಕೈಗಳನ್ನು ಕಟ್ಟಿಕೊಂಡು ವೇಗವಾಗಿ ಚಲಿಸಿದ ಈ ದೃಶ್ಯಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿವೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಹಾರ ಸಂಚಾರ ಪೊಲೀಸರು ಸಂಬಂಧಿತ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕ್ಲಿಪ್‌ನಲ್ಲಿ, ಯುವಕರು ಟ್ರಕ್‌ಗಳ ಸಮೀಪ ಅಪಾಯಕಾರಿಯಾಗಿ ಚಲಿಸುತ್ತಾರೆ. ಈ ದೃಶ್ಯಗಳು ರಸ್ತೆ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. “ಇದು ಧೈರ್ಯವಲ್ಲ, ಮೂರ್ಖತನ”, “ಅಮಾಯಕರ ಜೀವಕ್ಕೆ ಅಪಾಯ ತಂದಿಡುವವರ ವಿರುದ್ಧ ಕಠಿಣ ಕ್ರಮ ಬೇಕು” ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅನೇಕ ಬಳಕೆದಾರರು ಬೈಕ್‌ನ ನಂಬರ್ ಪ್ಲೇಟ್ ಆಧರಿಸಿ ಆರೋಪಿಗಳನ್ನು ಗುರುತಿಸಿ, ಭಾರಿ ದಂಡ ವಿಧಿಸುವಂತೆ ಹಾಗೂ ವಾಹನವನ್ನು ವಶಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಕೆಲವರು ಇಂತಹ ಚಾಲಕರ ಚಾಲನಾ ಪರವಾನಗಿಯನ್ನೇ ರದ್ದುಪಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


