Sunday, January 11, 2026

Viral | ಗಾಡಿಯಲ್ಲಿ ಸೀಟ್ ಇರೋದು 16, ಕೂತಿರೋ ಜನ 60: ನಿಮಗೂ ಈ ರೀತಿ ಹೋಗೋಕೆ ಧೈರ್ಯ ಇದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಬನ್ಸ್‌ವಾರ ಜಿಲ್ಲೆ ಆನಂದಪುರಿ ಪ್ರದೇಶದಿಂದ ಹೊರಬಂದಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೇವಲ 16 ಆಸನಗಳಿರುವ ಜೀಪಿನಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಜನರನ್ನ ಬೆಚ್ಚಿ ಬೀಳಿಸಿವೆ.

ವಾಹನದ ಒಳಗಿನ ಆಸನಗಳು ಮಾತ್ರವಲ್ಲದೆ, ಬೊನೆಟ್, ರೂಫ್, ಸ್ಟೆಪ್ನಿ ಹಾಗೂ ಚಾಲಕನ ಬಾಗಿಲಿನಲ್ಲೂ ಪ್ರಯಾಣಿಕರು ಅಂಟಿಕೊಂಡು ಕುಳಿತಿರುವುದು ನೋಡಬಹುದು. ಮಹಿಳೆಯರು, ವೃದ್ಧರು ಹಾಗೂ ಚಿಕ್ಕ ಮಕ್ಕಳೂ ಈ ರೀತಿ ನೇತಾಡಿಕೊಂಡು ಹೋಗುತ್ತಿರುವುದು ಜೊತೆಗೆ ಚಾಲಕ ಅತಿವೇಗದಲ್ಲಿ ವಾಹನ ಚಲಾಯಿಸುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: FOOD | ಫಾಟಾಫಟ್ ಅಂತ ರೆಡಿ ಆಗುತ್ತೆ ರವಾ ಉತ್ತಪ್ಪ! ನೀವೂ ಒಮ್ಮೆ ಟ್ರೈ ಮಾಡಿ

ವಿಡಿಯೋ ವೈರಲ್ ಆದ ನಂತರ ಜಿಲ್ಲಾಡಳಿತ ತಕ್ಷಣ ಕ್ರಮಕ್ಕೆ ಇಳಿದಿದೆ. ಸಾರಿಗೆ ಇಲಾಖೆ ಮತ್ತು ಟ್ರಾಫಿಕ್ ಪೊಲೀಸರು ಸ್ಥಳದಲ್ಲಿ ದಾಳಿ ನಡೆಸಿ, ಓವರ್‌ಲೋಡ್ ವಾಹನಗಳ ವಿರುದ್ಧ ದಂಡ ವಿಧಿಸಿದ್ದಾರೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಕೊರತೆಯಿಂದ ಜನರು ಇಂತಹ ಅಪಾಯಕರ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. (ವಾಹನಗಳಲ್ಲಿ ಈ ರೀತಿ ಪ್ರಯಾಣಿಸುವುದು ಅಪಾಯಕಾರಿ ಹಾಗೂ ಕಾನೂನಿನ ವಿರುದ್ಧ ಈ ಮಾಹಿತಿ ಕೇವಲ ಮನೋರಂಜನೆಗಷ್ಟೇ)

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!