Saturday, January 10, 2026

Viral | ತಾಯಿಯ ಮುಗ್ಧತೆ ಅನ್ನೋದು ಇದಕ್ಕೆ! ಚಳಿ ಆಗುತ್ತೆ ಅಂತ ಹುತಾತ್ಮ ಯೋಧನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಜಮ್ಮುವಿನ ರಣಬೀರ್ ಸಿಂಗ್ ಪುರಾ ಪ್ರದೇಶದಲ್ಲಿ ಹುತಾತ್ಮ ಯೋಧನ ಪ್ರತಿಮೆಗೆ ತಾಯಿ ಹೊದಿಕೆ ಹಾಕುತ್ತಿರುವ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ.

ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವವರು ಜಸ್ವಂತ್ ಕೌರ್. ತಮ್ಮ ಪುತ್ರ, ಬಿಎಸ್‌ಎಫ್ ಯೋಧ ಗುರ್ನಾಮ್ ಸಿಂಗ್ ಅವರನ್ನು ಅವರು ಇನ್ನೂ ಜೀವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಕರ್ತವ್ಯದ ವೇಳೆಯಲ್ಲಿ ಪ್ರಾಣ ತ್ಯಾಗ ಮಾಡಿದ ಗುರ್ನಾಮ್ ಸಿಂಗ್ ಅವರ ಸ್ಮರಣಾರ್ಥವಾಗಿ ಗ್ರಾಮದಲ್ಲಿ ಪ್ರತಿಮೆ ಸ್ಥಾಪಿಸಲಾಗಿತ್ತು. ಅದನ್ನು ಜಸ್ವಂತ್ ಕೌರ್ ತಮ್ಮ ಮಗನ ಪ್ರತಿರೂಪವೆಂದೇ ಭಾವಿಸಿದ್ದಾರೆ.

ಜಮ್ಮುವಿನಲ್ಲಿ ತೀವ್ರ ಚಳಿಗಾಲ ಆವರಿಸಿರುವ ಹಿನ್ನೆಲೆಯಲ್ಲಿ, “ನನ್ನ ಮಗನಿಗೆ ಚಳಿ ಆಗಬಾರದು” ಎಂಬ ತಾಯಿಯ ಮಮತೆಯಿಂದ ಪ್ರತಿಮೆಗೆ ಹೊದಿಕೆ ಹೊದಿಸಿರುವುದು ಜನರ ಮನಸ್ಸು ಮುಟ್ಟಿದೆ.

ಇದನ್ನೂ ಓದಿ: FOOD |ಸಿಂಪಲ್‌ ಆದ್ರೂ ಟೇಸ್ಟಿಯಾಗಿರೋ ಡ್ರೈ ಫ್ರೂಟ್ಸ್‌ ಸಲಾಡ್‌ ಹೀಗೆ ಮಾಡಿ, ರೆಸಿಪಿ ಇಲ್ಲಿದೆ

ವಿಡಿಯೋ ವೈರಲ್ ಆದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಕೆಲವರು ಇದನ್ನು ದೇವರಿಗೆ ಬಟ್ಟೆ ಹೊದಿಸುವ ಸಂಪ್ರದಾಯಕ್ಕೆ ಹೋಲಿಸಿದ್ದು, ಇನ್ನೂ ಕೆಲವರು ತಾಯಿಯ ಪ್ರೀತಿಗೆ ಪದಗಳೇ ಸಾಲದು ಎಂದು ಬರೆದಿದ್ದಾರೆ.

ಗುರ್ನಾಮ್ ಸಿಂಗ್ ಅವರು ಬಿಎಸ್‌ಎಫ್‌ನ 173ನೇ ಬಟಾಲಿಯನ್‌ನ ಯೋಧರಾಗಿದ್ದು, 2016ರಲ್ಲಿ ಗಡಿಯಲ್ಲಿ ಉಗ್ರರರನ್ನು ತಡೆಯುವ ವೇಳೆ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ವೀರಮರಣ ಹೊಂದಿದ್ದರು.

error: Content is protected !!