Sunday, January 11, 2026

Viral | 4,500 ದಂಡಕ್ಕೆ ಬೇಸತ್ತು ಟ್ರಕ್ ಮೇಲೆ ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಚಾಲಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ರಸ್ತೆ ಸಾರಿಗೆ ಅಧಿಕಾರಿ ವಿಧಿಸಿದ ದುಬಾರಿ ದಂಡದಿಂದ ತೀವ್ರವಾಗಿ ನೊಂದ ಟ್ರಕ್ ಚಾಲಕರೊಬ್ಬರು ಟ್ರಕ್ ಮೇಲೆಯೇ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಗಡಿಭಾಗದಲ್ಲಿ ನಡೆದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರಕ್ ಚಾಲಕನಿಗೆ ಕೇವಲ ದಾಖಲೆ ಪರಿಶೀಲನೆಯ ನೆಪದಲ್ಲಿ ಬರೋಬ್ಬರಿ ರೂ. 4,500 ದಂಡ ವಿಧಿಸಲಾಗಿತ್ತು. ಇದರಿಂದ ತೀವ್ರ ಬೇಸರಗೊಂಡ ಚಾಲಕ, ಪ್ರತಿಭಟನೆ ಮತ್ತು ಹತಾಶೆಯ ಪ್ರತೀಕವಾಗಿ ತನ್ನ ಟ್ರಕ್‌ನ ಮೇಲೇರಿ ನಿಂತು ತನ್ನ ದೇಹಕ್ಕೆ ಮತ್ತು ಟ್ರಕ್‌ಗೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.

ಸ್ಥಳದಲ್ಲಿ ಕೆಳಗೆ ನೆರೆದಿದ್ದ ಆರ್‌ಟಿಒ ಅಧಿಕಾರಿಗಳು ಮತ್ತು ಸ್ಥಳೀಯರು ಎಷ್ಟೇ ಮನವಿ ಮಾಡಿದರೂ, ಅಳುತ್ತಿರುವ ಆ ಚಾಲಕ ಟ್ರಕ್‌ನಿಂದ ಕೆಳಗೆ ಇಳಿಯಲು ನಿರಾಕರಿಸಿದರು. ವಿಡಿಯೋದಲ್ಲಿ, ಟ್ರಕ್ ಚಾಲಕ ತನ್ನ ಅಸಹಾಯಕತೆ ಮತ್ತು ಆರ್ಥಿಕ ಸಂಕಷ್ಟವನ್ನು ನೆನೆದು ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಕೆಲವರು ಘಟನೆಯ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು, ಇದು ಈಗ ಆಡಳಿತದ ಅತಿಯಾದ ದಂಡ ನೀತಿಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

error: Content is protected !!