Monday, November 17, 2025

Viral | ಮಧುರವಾದ ಮ್ಯೂಸಿಕ್ ಹುಟ್ಟೋಕೆ ಕಾಸ್ಟ್ಲಿವಾದ್ಯಗಳೇ ಬೇಕಾಗಿಲ್ಲ ಒಂದು ಎಲೆನೂ ಸಾಕು! ಏನಂತೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ಎಲ್ಲರ ಗಮನ ಸೆಳೆದಿದೆ. ಟೈಗರ್ ರಿಸರ್ವ್‌ನಲ್ಲಿ ಕೆಲಸ ಮಾಡುವ ಗೈಡ್ ಜೇಮ್ಸ್ ಭುಟಿಯಾ, ಕೇವಲ ಒಂದು ಎಲೆಯನ್ನು ಬಳಸಿ ಮೃದುವಾದ ವಿಶಿಲ್ ಧ್ವನಿ ಹೊರಡಿಸುತ್ತಿರುವುದು ನೆಟ್ಟಿಗರನ್ನು ಬೆರಗುಗೊಳಿಸಿದೆ. ಈ ಅಪರೂಪದ ಪ್ರತಿಭೆಯನ್ನು ಭಾರತೀಯ ಅರಣ್ಯ ಸೇವೆಯ (IFS) ಅಧಿಕಾರಿ ಪ್ರವೀನ್ ಕಾಸ್ವಾನ್ ಅವರು X ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಟೈಗರ್ ರಿಸರ್ವ್‌ ಗೈಡ್ ಜೇಮ್ಸ್ ಭುಟಿಯಾ ಎಂಬ ವ್ಯಕ್ತಿ ಕೇವಲ ಒಂದು ಎಲೆಯಿಂದಲೇ ಮಧುರವಾಗಿ ವಿಶಿಲ್ ಊದುತ್ತಿರುವುದು ಆ ವಿಡಿಯೋದಲ್ಲಿ ಕಾಣಿಸುತ್ತದೆ. ಯಾವುದೇ ವಾದ್ಯ ಯಂತ್ರವಿಲ್ಲದೇ ಇಷ್ಟು ಸುಂದರವಾದ ಧ್ವನಿ ಸೃಷ್ಟಿಸಿರುವುದಕ್ಕೆ ಅಧಿಕಾರಿ ಕಾಸ್ವಾನ್ ಅವರು ಭುಟಿಯಾಗೆ ಪ್ರಶಂಸೆ ಸಲ್ಲಿಸಿದ್ದಾರೆ.

ವಿಡಿಯೋ ಹಂಚಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳು, ನೂರಾರು ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರು ಭುಟಿಯಾ ಊದಿದ ಧ್ವನಿಯ ಸ್ವರ ಯಾವುದೊ ಒಂದು ಹಾಡಿನದ್ದು ಎಂದು ಚರ್ಚೆ ನಡೆಸಿದ್ದಾರೆ. ಕೆಲವರು “ಕಾಂಚಿ ರೇ ಕಾಂಚಿ ರೇ” (1971, ಹರೆ ರಾಮ ಹರೆ ಕೃಷ್ಣ) ಹಾಡಿನ ಸ್ವರ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, “ಟೈಗರ್‌ಗಳು ಇವರ ಪ್ರತಿಭೆಯಿಂದ ಮನರಂಜಿತರಾಗಿರುವುದರಿಂದಲೇ ಇವರು ಸುರಕ್ಷಿತರಾಗಿದ್ದಾರೆ” ಎಂದು ಹಾಸ್ಯ ಮಾಡಿದರು. ಇನ್ನೊಬ್ಬ ಬಳಕೆದಾರರು ಈ ಪ್ರತಿಭೆಯನ್ನು ಹೊಗಳಿದರೂ, ಇದನ್ನು ಪಕ್ಷಿಗಳನ್ನು ಆಕರ್ಷಿಸಲು ಏಕೆ ಬಳಸಬಾರದು ಎಂದು ಸಲಹೆ ನೀಡಿದರು. ಕೇವಲ ಒಂದು ಎಲೆಯಿಂದಲೇ ಇಷ್ಟು ಮಧುರ ಸಂಗೀತ ಮೂಡಿ ಬರಬಹುದು ಎಂದು ಕಂಡ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

https://twitter.com/ParveenKaswan/status/1989921287289114701?ref_src=twsrc%5Etfw%7Ctwcamp%5Etweetembed%7Ctwterm%5E1989921287289114701%7Ctwgr%5E97538ea95093be4e54bb995bb01c6dbdd3e33808%7Ctwcon%5Es1_c10&ref_url=https%3A%2F%2Fwww.news18.com%2Fviral%2Ftiger-reserve-guide-whistles-soothing-tune-using-a-leaf-ifs-officer-shares-video-ws-bl-9712199.html
error: Content is protected !!