February 28, 2026
Saturday, February 28, 2026
spot_img

VIRAL | ಸ್ಟಾರ್ಟ್‌ಅಪ್‌ ಕಂಪೆನಿಯ ಕಹಿ ಅನುಭವ ಹಂಚಿಕೊಂಡ ಯುವಕ! ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕಂಪನಿಯಲ್ಲಿ ಕೆಲಸ ಆರಂಭಿಸುವಾಗ ಉತ್ಸಾಹ, ಕನಸುಗಳು ಮತ್ತು ಭವಿಷ್ಯದ ಬಗ್ಗೆ ನಿರೀಕ್ಷೆಗಳು ತುಂಬಿರುತ್ತವೆ. ಆದರೆ ಕೆಲವೊಮ್ಮೆ ಕಚೇರಿಯ ಒಳರಾಜಕೀಯ, ತಾರತಮ್ಯ ಮತ್ತು ಅಸ್ಥಿರತೆ ಆ ಉತ್ಸಾಹವನ್ನೇ ಕೊಂದು ಬಿಡುತ್ತವೆ. ಇಂತಹ ಅನುಭವವೊಂದನ್ನು ಬೆಂಗಳೂರಿನ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ.

ಜೀವನ ತಮ್ಮ ಪೋಸ್ಟ್‌ನಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿಯ ಮತ್ತೊಂದು ಮುಖವನ್ನು ವಿವರಿಸಿದ್ದಾರೆ. ಮೂರು ತಿಂಗಳ ಪ್ರೊಬೇಷನ್ ಅವಧಿ ಮುಗಿಯುವ ಮುನ್ನವೇ ತಮಗೆ ಕೆಲಸದಿಂದ ತೆಗೆದು ಹಾಕಿದ್ದಾಗಿ ಯುವಕ ವಿವರಿಸಿದ್ದಾನೆ. ತಂಡವನ್ನು ಬದಲಾಯಿಸುವ ಯೋಜನೆ ಹಲವು ತಿಂಗಳಿನಿಂದಲೇ ನಡೆಯುತ್ತಿತ್ತೆಂದು, ಅದಕ್ಕೂ ಮುಂಚೆಯೇ ಹೊಸ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:

ಕಂಪನಿಗೆ ಕಷ್ಟದ ಸಮಯದಲ್ಲಿ ಶ್ರಮಿಸಿದವರನ್ನೇ ನಂತರ ಹೊರಹಾಕುವುದು ನೈತಿಕವಾಗಿ ಸರಿಯೇ ಎಂಬ ಪ್ರಶ್ನೆ ಕೇಳಿದ ಯುವಕ ಇಂಟರ್ವ್ಯೂ ಸಮಯದಲ್ಲಿ ನೀಡಿದ ಭರವಸೆಗಳು ಕೇವಲ ಮಾತುಗಳಾಗಿಯೇ ಉಳಿದವೆಯೇ? ನೀಡಿದ ಸ್ವಲ್ಪ ವೇತನ ಪರಿಹಾರದಿಂದ ವೃತ್ತಿಜೀವನದ ಗ್ಯಾಪ್ ಮತ್ತು ಮಾನಸಿಕ ಒತ್ತಡ ಹೋಗುತ್ತದೆಯೇ ಎಂದು ಕೂಡ ಪ್ರಶ್ನಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅನೇಕ ನೆಟ್ಟಿಗರು, ಉದ್ಯೋಗಿಗಳನ್ನೂ ಮನುಷ್ಯರಂತೆ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಈ ಅನುಭವವೇ ಮುಂದಿನ ಉತ್ತಮ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಯುವಕನಿಗೆ ಧೈರ್ಯ ತುಂಬಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !