Wednesday, November 5, 2025

ಬಿಹಾರದ ಅಭಿವೃದ್ಧಿಯ ವೇಗ ಹೆಚ್ಚಿಸಲು ಎನ್‌ಡಿಎಗೆ ಮತ ನೀಡಿ: ಜನತೆಗೆ ನಿತೀಶ್ ಕುಮಾರ್ ವಿಡಿಯೋ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಚುನಾವಣೆಗೆ ರಾಜಕೀಯ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಮತ್ತೊಮ್ಮೆ ಅಧಿಕಾರಕ್ಕೇರಲು ಹರಸಾಹಸ ಪಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ಮೂಲಕ ಜನರ ಸೆಳೆಯಲು ಮುಂದಾಗಿದ್ದಾರೆ.

ನಮ್ಮ ಸರ್ಕಾರದ ಆಳ್ವಿಕೆಯಲ್ಲಿ ಅಭಿವೃದ್ಧಿಯ ವೇಗ ಬಹಳಷ್ಟು ಹೆಚ್ಚಾಗಿದೆ. ಎನ್‌ಡಿಎ (NDA) ಮಾತ್ರ ರಾಜ್ಯವನ್ನು ಅಭಿವೃದ್ಧಿಪಡಿಸಬಹುದು. ಹೀಗಾಗಿ ಎನ್‌ಡಿಎಗೆ ಮತ ಚಲಾಯಿಸುವ ಮೂಲಕ ಮತ್ತೊಂದು ಅವಕಾಶ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ನಮಗೆ, ಎನ್‌ಡಿಎಗೆ, ಇನ್ನೊಂದು ಅವಕಾಶ ನೀಡಿ. ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ ಮತ್ತು ಬಿಹಾರವನ್ನು ಉನ್ನತ ರಾಜ್ಯಗಳಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದಾರೆ.

2005ರಲ್ಲಿ ತಾವು ಮುಖ್ಯಮಂತ್ರಿಯಾದಾಗ ಬಿಹಾರದ ಸ್ಥಿತಿ ತೀರಾ ಕಳಪೆಯಾಗಿತ್ತು. ಆ ಸಮಯದಲ್ಲಿ ಬಿಹಾರಿ ಎಂದು ಕರೆಯುವುದು ‘ಅವಮಾನದ ವಿಷಯ’ವಾಗಿತ್ತು. ರಾಜ್ಯದ ಅಭಿವೃದ್ಧಿಗಾಗಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಹಗಲಿರುಳು ಶ್ರಮಿಸಿದ್ದೇನೆ . ನಮ್ಮ ಸರ್ಕಾರ ಯುವಕರಿಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಸಾಕಷ್ಟು ಕೆಲಸ ಮಾಡಿದೆ. ದಲಿತರು ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಕೆಲಸ ಮಾಡಿದ್ದೇನೆ. ಬಿಹಾರಿಯಾಗಿರುವುದು ಅವಮಾನದ ವಿಷಯವಲ್ಲ, ಆದರೆ ಗೌರವದ ವಿಷಯ ಎಂದು ನುಡಿದರು.

error: Content is protected !!