Friday, November 14, 2025

LIFE | ವಯಸ್ಸಾದಂತೆ ಜೀವನದಲ್ಲಿ ಉತ್ಸಾಹ ಹೆಚ್ಚಾಗ್ಬೇಕಾ? ಹಾಗಿದ್ರೆ ಈ ಅಭ್ಯಾಸಗಳಿಗೆ ಗುಡ್ ಬೈ ಹೇಳಿ

ವಯಸ್ಸಾದ ನಂತರ ಜೀವನತೋತ್ಸಾಹ ಕಡಿಮೆಯಾಗುತ್ತದೆ ಎನ್ನುವುದು ಸಾಮಾನ್ಯ ಭಾವನೆ. ಆದರೆ ನಿಜ ಹೇಳಬೇಕಾದರೆ, ಸಂತೋಷವು ವಯಸ್ಸಿನ ಮೇಲೆ ಅಲ್ಲ, ನಮ್ಮ ದಿನನಿತ್ಯದ ಅಭ್ಯಾಸಗಳ ಮೇಲೆ ಅವಲಂಬಿತವಾಗಿದೆ. ಕೆಲವು ಹಳೆಯ, ಅನಗತ್ಯ ಕ್ರಮಗಳನ್ನು ಬಿಟ್ಟುಬಿಟ್ಟರೆ ಜೀವನ ಹೆಚ್ಚು ಹಗುರವಾಗುತ್ತದೆ, ಮನಸ್ಸು ಹೆಚ್ಚು ಶಾಂತವಾಗುತ್ತದೆ ಮತ್ತು ಸಂತೋಷದ ಬಾಗಿಲುಗಳು ಸ್ವತಃ ತೆರೆಯುತ್ತವೆ.

  • ಕ್ಷಮಿಸಲು ಹಿಂಜರಿಯಬೇಡಿ: ನಮ್ಮನ್ನು ನೋಯಿಸಿದವರ ಬಗ್ಗೆ ಕೋಪ, ಅಸಹನೆ ಹಿಡಿದುಕೊಳ್ಳುವುದರಿಂದ ಮಾನಸಿಕ ಭಾರ ಹೆಚ್ಚು. ಕ್ಷಮಿಸುವುದರಿಂದ ಮನಸ್ಸು ಹಗುರವಾಗುತ್ತದೆ. ಕ್ಷಮಾಪಣೆಯ ಮನೋಭಾವ ಬೆಳೆಸಿಕೊಳ್ಳುವುದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
  • ದೇಹವನ್ನು ‘ಪ್ರಾಜೆಕ್ಟ್’ ಎಂದು ನೋಡುವ ಅಭ್ಯಾಸ ಬಿಡಿ: ವ್ಯಾಯಾಮ ಹಾಗೂ ಪೌಷ್ಟಿಕ ಆಹಾರ ಅಗತ್ಯ, ಆದರೆ ದೇಹವನ್ನು ಯಶಸ್ಸಿನ ಯೋಜನೆಯಂತೆ ಕಾಡಬೇಡಿ. ನಿಮ್ಮ ದೇಹ ನಿಮ್ಮ ಸಂಗಾತಿ ಅದಕ್ಕೆ ಪ್ರೀತಿ, ಸಹನೆ ಮತ್ತು ಯೋಗ್ಯ ಆಹಾರ ನೀಡಿ.
  • ದ್ವೇಷವನ್ನು ಹಿಡಿದಿಡಬೇಡಿ: ದ್ವೇಷವನ್ನು ಹಿಡಿದಿಟ್ಟುಕೊಳ್ಳುವುದು ಮನೆಯಲ್ಲೇ ಬೆಂಕಿ ಹಚ್ಚಿಕೊಂಡಂತೆ. ಅದು ನಿಮ್ಮತನವನ್ನೇ ಸುಡುತ್ತದೆ. ದ್ವೇಷವನ್ನು ಹೊರಬಿಟ್ಟು ಸಂತೋಷಕ್ಕೆ ಸ್ಥಳಕೊಡಿ.
  • ‘ಸರಿಯಾದ ಸಮಯ’ಕ್ಕಾಗಿ ಕಾಯುವ ಅಭ್ಯಾಸ ಬಿಡಿ: ಪರಿಪೂರ್ಣ ಸಮಯ ಎಂದೇನಿಲ್ಲ. ಇರುವ ಕ್ಷಣವೇ ಉತ್ತಮ. ಮುಂದುವರಿಯುವ ದೈರ್ಯವಿದ್ದರೆ ಅವಕಾಶಗಳು ನಿಮ್ಮ ಮುಂದೇ ನಿರ್ಮಾಣವಾಗುತ್ತವೆ.
  • ವಾಸ್ತವಕ್ಕೆ ವಿರೋಧಿಸಬೇಡಿ: ಎಲ್ಲವೂ ನಿಮ್ಮಂತೆ ಆಗುವುದಿಲ್ಲ. ವಾಸ್ತವಿಕತೆಯನ್ನು ಒಪ್ಪಿಕೊಂಡರೆ ಬದಲಾವಣೆ ನಡೆಸಲು ಬೇಕಾದ ಶಕ್ತಿ ಸಿಗುತ್ತದೆ.
error: Content is protected !!