Friday, January 2, 2026

JAN BORN | ಜನವರಿಯಲ್ಲಿ ಹುಟ್ಟಿದವರ ಬಗ್ಗೆ ತಿಳ್ಕೋಬೇಕಾ? ಇದನ್ನು ಓದಿ ಸಾಕು

ಜನವರಿಯಲ್ಲಿ ಹುಟ್ಟಿದವರ ಗುಣಗಳಿವು..

ಇವರು ಹೆಚ್ಚಾಗಿ ಸೋಶಿಯಲೈಸ್ ಆಗೋದಿಲ್ಲ. ಹೆಚ್ಚಾಗಿ ತಮ್ಮ ಜೀವನವನ್ನು, ಅದರಲ್ಲೂ ವಯಕ್ತಿಕ ಜೀವನವನ್ನು ರಹಸ್ಯವಾಗಿಡಲು ಬಯಸುತ್ತಾರೆ. ತಾವು ಏನೇ ಮಾಡಿದರೂ ಅದನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಲು ಬಯಸೋದಿಲ್ಲ.

ಜನವರಿಯಲ್ಲಿ ಜನಿಸಿದ ಜನರು ಅತ್ಯಂತ ಶ್ರಮಜೀವಿಗಳು ಮತ್ತು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಅವರು ಬಹಳಷ್ಟು ಅದೃಷ್ಟವನ್ನು ಹೊಂದಿದ್ದಾರೆ, ಅದು ಅವರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಜನವರಿಯಲ್ಲಿ ಜನಿಸಿದ ಜನರು ಸುತ್ತಿ ಬಳಸಿ ಮಾತನಾಡುವುದಿಲ್ಲ. ಅವರು ನೇರವಾಗಿ ಮಾತನಾಡುತ್ತಾರೆ, ಮತ್ತು ಇದು ಹೆಚ್ಚಾಗಿ ಇತರರನ್ನು ನೋಯಿಸುತ್ತದೆ. ಆದಾಗ್ಯೂ, ಅವರ ನೇರ ನಡತೆಯಿಂದ ಅವರ ಸಂಬಂಧಗಳನ್ನು ಎಂದಿಗೂ ಹಾಳುಮಾಡುವುದಿಲ್ಲ.


ಈ ತಿಂಗಳಿನಲ್ಲಿ ಹುಟ್ಟಿದವರಿಗೆ ಓದು ಬರಹದ ಬಗ್ಗೆ ಆಸಕ್ತಿ ಇದೆ. ಬೇರೆಯವರಿಗೆ ಕಲಿಸುವುದು, ಬೇರೆಯವರಿಂದ ಕಲಿಯುವ ಅಭ್ಯಾಸ ಇದೆ. ಬೇರೆಯವರನ್ನು ಮೆಚ್ಚಿಸೋಕೆ ಇವರು ಮಾತನಾಡೋದಿಲ್ಲ. ದುಃಖವಾದರೂ ಪರವಾಗಿಲ್ಲ ಇದ್ದದ್ದನ್ನು ಇದ್ದಂತೆಯೇ ಹೇಳುತ್ತಾರೆ.

ಬೇರೆಯವರಿಂದ ಸುಲಭವಾಗಿ ಕೋಪಕ್ಕೆ ಈಡಾಗುತ್ತಾರೆ, ಜಲಸ್‌ ಪರ್ಸನಾಲಿಟಿ, ಮಕ್ಕಳು ಹಾಗೂ ಫ್ಯಾಮಿಲಿ ಬಗ್ಗೆ ವಿಶೇಷ ಕಾಳಜಿ ಇದೆ. ಎಷ್ಟೇ ಸಮಸ್ಯೆ ಬಂದರೂ ಮುನ್ನಡೆಯುತ್ತಾರೆ.

error: Content is protected !!