February 28, 2026
Saturday, February 28, 2026
spot_img

ಯುದ್ಧ ಕಾರ್ಮೋಡ: ಮಂಗಳೂರಿನಿಂದ ದುಬೈಗೆ ಟೇಕಾಫ್ ಆಗಿದ್ದ ವಿಮಾನ ಅರ್ಧ ದಾರಿಯಿಂದಲೇ ವಾಪಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಆರಂಭವಾಗಿರುವ ಯುದ್ಧದ ಕಿಡಿ ಮಂಗಳೂರಿಗೂ ತಟ್ಟಿದ್ದು, ದುಬೈನತ್ತ ಶನಿವಾರ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ ಅರ್ಧದಾರಿಯಿಂದಲೇ ಮತ್ತೆ ಮಂಗಳೂರಿಗೆ ವಾಪಸ್ಸಾಗಿದೆ.

ಶನಿವಾರ ನಿಗದಿತ ಸಮಯದಲ್ಲಿ ಮಂಗಳೂರಿನಿಂದ ಟೇಕಾಫ್ ಆಗಿದ್ದ ಈ ವಿಮಾನ, ದುಬೈನತ್ತ ಹಾರಾಟ ಆರಂಭಿಸಿತ್ತು. ಈ ನಡುವೆ ಇರಾನ್ ವಾಯುಮಾರ್ಗ ಲಭ್ಯವಿಲ್ಲದ ಕಾರಣ ಅರ್ಧ ದಾರಿಯಿಂದಲೇ ಮತ್ತೆ ವಾಪಸ್ಸಾಗಿದೆ. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಈ ವಿಮಾನದ ಪ್ರಯಾಣ ರದ್ದಾಗಿರುವುದನ್ನು ಅಧಿಕೃತವಾಗಿ ಘೋಷಿಸಲಾಯಿತು. ವಿಮಾನದಲ್ಲಿ ಒಟ್ಟು 174 ಪ್ರಯಾಣಿಕರು,6 ಮಂದಿ ಸಿಬ್ಬಂದಿಗಳಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.


ಶನಿವಾರ ಮಂಗಳೂರಿನಿಂದ ದೋಹಾಕ್ಕೆ ತೆರಳುತ್ತಿದ್ದ ಮತ್ತೊಂದು ವಿಮಾನವನ್ನು ಕೂಡಾ ಪ್ರಯಾಣ ರದ್ದುಗೊಳಿಸಿ ತುರ್ತಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ. ವಾಯುಮಾರ್ಗದ ಬದಲಾವಣೆ ಹಾಗೂ ಸುರಕ್ಷತೆ, ಭದ್ರತಾ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇಂಡಿಗೋ ಸಂಸ್ಥೆ ಕೂಡಾ ತನ್ನ ಮಂಗಳೂರು-ದುಬೈ ವಿಮಾನವನ್ನು ಕೂಡ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !