Monday, October 13, 2025

ಜಲಾಶಯಕ್ಕೆ ಹಾಕಿದ್ದ ಒಡ್ದು ಒಡೆದು ಹಳ್ಳ ಸೇರಿದ ನೀರು: ರೈತರಿಗೆ ನಿರಾಸೆ!

ಹೊಸದಿಗಂತ ವರದಿ ವಿಜಯನಗರ:

ಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಮಾಲವಿ ಜಲಾಶಯದಲ್ಲಿ ನೀರು ಬಂದಾಗಲೆಲ್ಲಾ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಸೋರುವಿಕೆ ಆಗುತಿತ್ತು. ಹರಿದು ಹಳ್ಳ ಸೇರುವ ನೀರು ಸೋರುವಿಕೆ ತಡೆಗಟ್ಟಲು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಾಸಕ ಕೆ ನೇಮಿ ರಾಜ್ ನಾಯ್ಕ್ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು. ಮಳೆಯಿಂದ ಹರಿದು ಬರುವ ನೀರಿನಿಂದ ಗೇಟ್ ದುರಸ್ತಿ ಕಾರ್ಯಕ್ಕೆ ಅಡ್ಡಿ ಆಗಬಾರದು ಹರಿದು ಬರುವ ನೀರು ತಡೆಗಟ್ಟುವ ಎಂಬ ಉದ್ದೇಶದಿಂದ ಜಲಾಶಯದ ಒಳಗೆ ಒಡ್ದು ನಿರ್ಮಿಸಲಾಗಿತ್ತು.

ಮಳೆ ನೀರು ಹೆಚ್ಚಾಗಿ ಹರಿದು ಬಂದಿದ್ದರಿಂದ ನೀರಿನ ಸಂಗ್ರಹ ಹೆಚ್ಚಾಗಿದ್ದರಿಂದ ಜಲಾಶಯದಲ್ಲಿ ಹಾಕಿದ್ದ ಒಡ್ದು ಒಡೆದು ನೀರು ಹರಿಯಿತು. ಹಿಂಗಾರಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ವೇಸ್ಟ್ ಆಗಿ ನೀರು ಹರಿಯುತ್ತಿರುವುದರಿಂದಾಗಿ ನಿರಾಸೆಯ ಕಾರ್ಮೋಡ ಕವಿದಂತಾಗಿದೆ.

ನೀರು ಬರುವುದರ ಒಳಗಾಗಿ ಗೇಟ್ ದುರಸ್ತಿ ಕಾಮಗಾರಿ ಮುಗಿಸಬೇಕಿತ್ತು ಕಳೆದ ಐದಾರು ತಿಂಗಳು ಕಳೆದರೂ ಕೆಲಸ ಪೂರ್ಣವಾಗಿಲ್ಲ. ಕಾಮಗಾರಿ ವಿಳಂಬವಾಗಿದ್ದರಿಂದ ಬಂದ ನೀರು ಹರಿದು ಹೋಗುವಂತಾಗಿದೆ ಇದು ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಕ್ಷೇತ್ರದ ಶಾಸಕರಾದ ಕೆ ನೇಮಿ ರಾಜ್ ನಾಯ್ಕ್ ಮಾಧ್ಯಮದವರೊಂದಿಗೆ ಮಾತನಾಡಿ ಮಾಲವಿ ಜಲಾಶಯ ಗೇಟ್ ಗಳಲ್ಲಿನ ನೀರು ಸೋರುವಿಕೆ ತಡೆಗಟ್ಟಲು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ.ಸು 4 ಕೋಟಿ 2 ಲಕ್ಷ 72 ಸಾವಿರ ರೂ ಅನುದಾನದಿಂದ ಗೇಟ್ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು ಜಲಾಶಯಕ್ಕೆ ನೀರು ಬಂದು ಕೆಲಸಕ್ಕೆ ಅಡ್ಡಿ ಆಗಬಾರದು ಗೇಟ್ ಅಳವಡಿಸುವ ಕ್ರೇನ್ ಓಡಾಡಲು ಜಲಾಶಯದ ಒಳಗೆ ವಡ್ದು ಹಾಕಲಾಗಿತ್ತು. ಕೆಲಸ ಪ್ರಾರಂಭವಾಗುವ ಮೊದಲು ಡ್ಯಾಂನಲ್ಲಿ ನೀರು ಖಾಲಿ ಆದ್ರೆ ಮಾತ್ರ ಕೆಲಸ ಮಾಡಲು ಆಗುತ್ತೆ ಎಂದು ಮೊದಲೇ ಹೇಳಿದ್ದೆ. ಮೇಲಿಂದ ನೀರು ಬಂದಿದ್ದರಿಂದ ನೀರಿನ ಸಂಗ್ರಹ ಹೆಚ್ಚಾಗಿ ಒಡ್ಡಿನ ಮೇಲೆ ನೀರು ಹತ್ತಿ ಹರಿದರೆ ಕೆಲಸ ಮಾಡಲು ಆಗುವುದಿಲ್ಲ ಅವಸರದಲ್ಲಿ ಮಾಡುವ ಕೆಲಸ ಇದಲ್ಲ ಮಾಡುವ ಈ ಕೆಲಸ ಶಾಶ್ವತವಾಗಿ ಉಳಿಯಲು ಗುಣ ಮಟ್ಟದಿಂದ ಮಾಡಬೇಕಾಗಿದೆ. ಈಗಾಗಲೇ ಮೂರು ಗೇಟ್ ಅಳವಡಿಸಲಾಗಿದೆ ಮುಂದಿನ ವಾರ ಇನ್ನು ನಾಲ್ಕು ಗೇಟ್ ಗಳನ್ನು ಅಳವಡಿಸಲಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

error: Content is protected !!