Tuesday, December 2, 2025

ನಮ್ಮಲ್ಲೇನು ಪ್ರಾಬ್ಲಮ್‌ ಇಲ್ಲ, ನಾನು ಸಿಎಂ ಬ್ರದರ್ಸ್‌ ಥರ ಕೆಲಸ ಮಾಡ್ತಿದಿವಿ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾನು – ಸಿಎಂ ಬ್ರದರ್ಸ್‌ ತರಹ ಕೆಲಸ ಮಾಡ್ತೀವಿ, ನಮ್ಮ ನಡುವೆ ಯಾವುದೇ ಗುಂಪು ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಹಿನ್ನೆಲೆ ವಿಧಾನಸೌಧದಲ್ಲಿಂದು ಡಿಸಿಎಂ ಡಿಕೆಶಿ ಹನುನಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್‌ ಮೀಟಿಂಗ್‌ ವಿಚಾರ ನನಗೂ ಸಿಎಂಗೆ ಸಂಬಂಧಿಸಿದ ವಿಚಾರ. ನಾವಿಬ್ರೂ ಬ್ರದರ್ಸ್ ಥರ ಇದ್ದೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ ಎಂದು ನುಡಿದರು.

ನಮ್ಮಲ್ಲಿ ಯಾವುದೇ ಗುಂಪಿಲ್ಲ, ನಾವು ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಾಗಿ ಗುಂಪು ಯಾಕೆ ಬೇಕು? ನೀವೆಲ್ಲ ಏನೇನೋ ತೋರಿಸ್ತಿದೀರ, ಸಿದ್ದರಾಮಯ್ಯದೊಂದು ಗುಂಪು, ಡಿಕೆಶಿ ಗುಂಪು ಅಂತ ನಮ್ಮಲ್ಲಿ ಗುಂಪು ಇಲ್ಲ ಎಂದು ಸ್ಪಷ್ಟಪಡಿಸಿದರು

error: Content is protected !!