ಹೊಸದಿಗಂತ ಡಿಜಿಟಲ್ ಡೆಸ್ಕ್:
2036 ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ರಿಲಯನ್ಸ್ ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಎಂದು ಹೇಳಿದರು.
ರಾಜ್‌ಕೋಟ್‌ನಲ್ಲಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದ ಭಾಗವಾಗಿ ಆಯೋಜಿಸಲಾಗಿರುವ ʻಕಚ್-ಸೌರಾಷ್ಟ್ರಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ವ್ಯಾಪಾರ ಪ್ರದರ್ಶನʼವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಕೇಶ್ ಅಂಬಾನಿ ಅವರು, ಭಾರತಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟ ತರುವ ಮೋದಿ ಅವರ ದೃಷ್ಟಿಕೋನವನ್ನ ರಿಲಯಲ್ಸ್ ಸಂಸ್ಥೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದು ದೇಶದಲ್ಲಿರುವ ಜಾಗತೀಕ ಕ್ರೀಡಾ ಮಹತ್ವಾಕಾಂಕ್ಷಿಗಳಿಗೂ ದೊಡ್ಡ ವೇದಿಕೆಯಾಗಲಿದೆ ಎಂದು ಶ್ಲಾಘಿಸಿದರು.
ಗುಜರಾತ್ ಶೃಂಗ ಸಮ್ಮೇಳನದಲ್ಲಿ ಮೋದಿ ಅವರು ಪಾಲ್ಗೊಂಡಿದ್ದಕ್ಕೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಇದು ಸೌರಾಷ್ಟ್ರ ಮತ್ತು ಕಚ್ ಜನರಿಗೆ ಸಿಕ್ಕ ದೊಡ್ಡ ಗೌರವವೂ ಹೌದು. ಪ್ರಧಾನಿ ಅವರ ಉಪಸ್ಥಿತಿಯು ಈ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಅವರಿಗೆ ಇರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಬಣ್ಣಿಸಿದರು.

