Sunday, October 12, 2025

ಆರ್ ಎಸ್ ಎಸ್ ಗೆ ನಿರ್ಬಂಧ ಹಾಕಿದರೆ ಸುಮ್ಮನಿರಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಗುವ ವಿಚಾರಕ್ಕೆ ಸಂಬಂಧಪಟ್ಟಂತೆಪ್ರಿಯಾಂಕ ಖರ್ಗೆ ವಿರುದ್ಧ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.

ಮುತ್ತಾತ ಅವರು ಆಕ್ರಮಣಕ್ಕೆ ಒಳಗಾಗಿದ್ದರು. ರಾಹುಲ್ ಗಾಂಧಿ ಮುತ್ತಾತ ನರಸಿಂಹರಾವ್ ಕಡಿವಾಣಕ್ಕೆ ಮುಂದಾಗಿದ್ದರು. ದೇಶದಲ್ಲಿ ಮೂರನೇ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದೆ ಒಂದು ವೇಳೆ ಆರ್ ಎಸ್ ಎಸ್ ಗೆ ನಿರ್ಬಂಧ ಹಾಕಿದರೆ ನಾವು ಸುಮ್ಮನಿರಲ್ಲ. ಕುಕ್ಕರ್ ಹಿಡಿದವರು, ತಲ್ವಾರ್ ಇವರಿಗೆ ಬ್ರದರ್ಸ್ ಇದ್ದಂತೆ. ತಲ್ವಾರ್ ಹಿಡಿದು ತಿರುಗಾಡುವವರನ್ನು ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.

ಆರ್ ಎಸ್ ಎಸ್ ಭಾರತದ ತಾಲಿಬಾನಿಗಳು ಎಂದು ಎಂಎಲ್ಸಿ ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಆರ್ ಎಸ್ ಎಸ್ ಗೆ ಬೈದರೆ ಮಂತ್ರಿ ಮಾಡುತ್ತಾರೆ ಅಂತ ಹರಿಪ್ರಸಾದ್ ಅಂದುಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

error: Content is protected !!