ಹೊಸದಿಗಂತ ವರದಿ ರಾಯಚೂರು:
ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಜಾತಿ ಜನಗಣಿಯನ್ನು ಒಂದೆರಡು ತಿಂಗಳಲ್ಲಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಕನಕ ಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಅವರ ಪುಣ್ಯಾರಾಧನೆ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾತಿ ಜನಗಣತಿ ಕುರಿತು ಸರ್ಕಾರ ಚರ್ಚಿಸುತ್ತಿದೆ ಒಂದು ತಿಂಗಳು ಇಲ್ಲವೆ ಬಹಳವೆಂದರೆ ಎರಡು ತಿಂಗಳಲ್ಲಿ ಜಾತಿ ಜನಗಣತಿಯನ್ನು ಪ್ರಕಟಿಸಲಾಗುವುದು ಎಂದು ಸಾರ್ವಜನಿಕರು ಕೇಳಿದ ಪ್ರಶ್ನೆಯೊಂದಕ್ಕೆ ತಿಳಿಸಿದರು. ಕುರುಬ ಸಮುದಾಯವನ್ನು ಎಸ್ಟಿ ಜಾತಿಗೆ ಸೇರ್ಪಡೆ ಮಾಡುವ ಅಧಿಕಾರ ನನ್ನ ಬಳಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ನಾನು ಮಾಡಿ ಬಿಸಾಕುತ್ತಿದ್ದೆ. ಆ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದರು.
ಎಸ್ಟಿ ಜಾತಿಗೆ ಸೇರ್ಪಡೆ ಮಾಡುವುದಕ್ಕೆ ರಾಜ್ಯ ಸರ್ಕಾರ ಇಗಾಗಲೇ ಒಂದು ಬಾರಿ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದೆ. ಇನ್ನೊಂದು ಬಾರಿ ಮನವಿಯನ್ನು ಸಲ್ಲಿಸುತ್ತೇವೆ. ಒಂದೆರಡು ಬಾರಿ ಒತ್ತಡ ಹಾಕಿದರೆ ಸಾಕಾಗುವುದಿಲ್ಲ ನಿರಂತರವಾಗಿ ಕೇಂದ್ರದ ಮೇಲೆ ಒತ್ತಡ ಹಾಕುತ್ತಲೇ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಗೆ ಹೇಳಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾರ್ವಜನಿಕೆಡೆಗೆ ಥಂಬ್ (ಹೆಬ್ಬೆರಳನ್ನು) ತೋರಿಸುವ ಮೂಲಕ ಕೆಲ ನಿಮಿಷ ಮೌನವಾಗಿದ್ದದ್ದು ಸಾರ್ವಜನಿಕರು ಹರ್ಷೋದ್ಘಾರದ ಕೇಕೆ ಹಾಕುವಂತೆ ಮಾಡಿತು.
ಕುರುಬ ಸಮುದಾಯಕ್ಕೆ ಎಸ್ಟಿ ಜಾತಿಗೆ ಸೇರ್ಪಡೆ ಮಾಡಬೇಕೆಂದು ರಾಜ್ಯ ಸರ್ಕಾರ ಮನವಿಯನ್ನು ಈಗಾಗಲೇ ಕೇಂದ್ರಕ್ಕೆ ಕಳಿಸಿದೆ ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ. ಕೆಲ ಸ್ಪಷ್ಟತೆಯನ್ನು ಕೇಳಿತ್ತು ಈಗ ರಾಜ್ಯ ಸರ್ಕಾರ ಸ್ಪಷ್ಟನೆಯನ್ನು ನೀಡಿ ಮತ್ತೆ ಕಳಿಸಿದೆ ಈಗೇನಿದ್ದರೂ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ನಾನು ಅಧಿಕಾರಕ್ಕೆ ಗಂಟು ಬಿದ್ದವನಲ್ಲ. ಹೋರಾಟದಿಂದ ಬಂದವನು. ಹೋರಾಡುತ್ತಲೇ ಇರುತ್ತೇನೆ. ಧ್ವನಿ ಇಲ್ಲದವರಿಗೆ ಧ್ವನಿ ಬರುವವರೆಗೂ ಹೋರಾಡುತ್ತಲೇ ಇರುತ್ತೇನೆ. ಜನರಲ್ಲಿ ಪ್ರಶ್ನಿಸುವ ಧ್ವನಿ ಬಂದಿದೆ ಎಂದರೆ ಶಿಕ್ಷಣ ದೊರೆತ್ತಿದೆ ಎಂದರ್ಥ ಎಂದು ಜನತೆ ಮುಖ್ಯಮಂತ್ರಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದುದಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು.
ಬೀದರ, ಗುಲಬರ್ಗಾ, ಯಾದಗಿರಿ ತಾಲೂಕುಗಳಲ್ಲಿ ಗೊಂಡ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕಳಿಸಿದ್ದೇ. ಕೆಲ ಸ್ಪಷ್ಟನೆಯನ್ನು ಕೇಳಿ ಕೇಂದರ ಮರಳಿ ಕಳಿಸಿತ್ತು. ಅವಕ್ಕೆಲ್ಲ ಸ್ಪಷ್ಟನೆಯನ್ನು ನೀಡಿ ಮತ್ತೆ ಕಳಿಸಿಕೊಟ್ಡಿದ್ದೇವೆ ಎಂದು ಹೇಳಿದರು.



