April 9, 2026
Thursday, April 9, 2026
spot_img

ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತಾಡ್ತೀವಿ, ಹಂಗೆಲ್ಲ ಜನರಿಗೆ ತೊಂದರೆ ಆಗೋಕೆ ಬಿಡಲ್ಲ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತಾಡ್ತೀವಿ, ಹಂಗೆಲ್ಲ ಜನರಿಗೆ ತೊಂದರೆ ಆಗೋಕೆ ಬಿಡಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮೆಟ್ರೋ ದರ ಹೆಚ್ಚಾಗಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ಮೆಟ್ರೋ ಚೇರ್ಮನ್ ಆಗಿ ಕೇಂದ್ರ ಸರ್ಕಾರದ ಚೇರ್ಮನ್ ಇದ್ದಾರೆ. ಇವತ್ತು ಅಥವಾ ನಾಳೆ ಅವರ ಜೊತೆ ಮಾತನಾಡುತ್ತೇನೆ. ಜನರಿಗೆ ತೊಂದರೆ ಕೊಡೋಕೆ ಬಿಡಲ್ಲ. ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಭ್ರಮೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ದೂರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !