ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇಂದು ಆಯುಧ ಪೂಜೆ ಸಂಭ್ರಮ ಮನೆಮಾಡಿದ್ದು, ಎಲ್ಲೆಡೆ ಹೂವು, ಹಣ್ಣು ಖರೀದಿ ಜೋರಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯ ಸುತ್ತಮುತ್ತ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.
ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹೂವು, ಹಣ್ಣು ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಈ ಹಿನ್ನೆಲೆ ಟೌನ್‌ಹಾಲ್‌ನಿಂದ ಕೆಆರ್ ಮಾರ್ಕೆಟ್‌ವರೆಗೆ ಟ್ರಾಫಿಕ್ ಬಿಸಿ ತಟ್ಟಿದೆ. ಖರೀದಿಗೆ ಬಂದ ಜನರು ಫ್ಲೈಓವರ್ ಮೇಲೆಯೂ ವಾಹನಗಳನ್ನು ಪಾರ್ಕ್ ಮಾಡಿದ್ದು, ಫ್ಲೈ ಓವರ್ ಮೇಲೆಯೂ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಬೆಲೆ ಏರಿಕೆಯಾದರೂ ಹಬ್ಬರ ಸಂಭ್ರಮ ಜೋರಾಗಿ ಇದೆ.
ಆಯುಧ ಪೂಜೆ ಸಂಭ್ರಮ: ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಜೋರು ಜೋರು
