June 14, 2026
Sunday, June 14, 2026
spot_img

WEATHER |ಕರ್ನಾಟಕದ ಕರಾವಳಿಯಲ್ಲಿ ಆ.7ರವರೆಗೆ ಭಾರಿ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 7ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಹೆಚ್ಚು ಮಳೆಯಾಗಲಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ,ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಆಗುಂಬೆ, ಸಿದ್ದಾಪುರ, ಮೂಡುಬಿದಿರೆ, ಮಂಕಿ, ಗೇರುಸೊಪ್ಪ, ಧರ್ಮಸ್ಥಳ, ಬೆಳ್ತಂಗಡಿ,ಉಡುಪಿ, ಸುಳ್ಯ, ಪುತ್ತೂರು, ಕೊಟ್ಟಿಗೆಹಾರ, ಕೊಪ್ಪ, ಕಾರ್ಕಳ ಕಮ್ಮರಡಿ, ಕದ್ರಾ, ಹೊನ್ನಾವರ, ಭಾಗಮಂಡಲ, ತರೀಕೆರೆ, ಶೃಂಗೇರಿ, ಸೋಮವಾರಪೇಟೆ, ಶಕ್ತನಗರ, ಪೊನ್ನಂಪೇಟೆ, ನಾಪೋಕ್ಲು, ಲೋಂಡಾ, ಕಳಸ, ಜಯಪುರ, ಅಜ್ಜಂಪುರದಲ್ಲಿ ಮಳೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !