February 5, 2026
Thursday, February 5, 2026
spot_img

WEATHER | ರಾಜ್ಯದಲ್ಲಿ ಚಳಿ ಬಹುತೇಕ ಕಡಿಮೆ, ಮಧ್ಯಾಹ್ನಕ್ಕೆ ನೆತ್ತಿ ಸುಡುವ ಬಿಸಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಚಳಿ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಮಧ್ಯಾಹ್ನದಲ್ಲಿ ಅತಿಯಾದ ಬಿಸಿಲಿದ್ದು, ನೆತ್ತಿ ಸುಡುತ್ತಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಬೆಳಗ್ಗೆ ಹಾಗೂ ಸಂಜೆ ಮಾತ್ರ ಚಳಿಯ ಅನುಭವವಾಗುತ್ತಿದೆ.

ಉಳಿದ ಸಮಯದಲ್ಲಿ ಜೋರು ಬಿಸಿಲಿದ್ದು, ಜನ ಈಗಲೇ ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಗರಿಷ್ಠ ತಾಪಮಾನವು 33°C ವರೆಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಮಧ್ಯಾಹ್ನದ ಸಮಯದಲ್ಲಿ ಸೆಕೆ ಹೆಚ್ಚಿರಲಿದೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಮುಂಜಾನೆ ಚಳಿಯ ಅನುಭವವಾಗಲಿದೆ. ಗರಿಷ್ಠ ತಾಪಮಾನವು 31°C – 33°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !