February 13, 2026
Friday, February 13, 2026
spot_img

WEATHER | ರಾಜ್ಯಕ್ಕೆ ಅವಧಿಗೂ ಮುನ್ನವೇ ಸಮ್ಮರ್ ಶಾಕ್: ಕರಾವಳಿಯಲ್ಲಿ ಹೆಚ್ಚಿದ ತಾಪಮಾನ

ರಾಜ್ಯದಲ್ಲಿ ಈ ಬಾರಿ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಬೇಸಿಗೆಯ ತಾಪ ತಟ್ಟಲಿದೆ. ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುತ್ತಿದ್ದ ಬೇಸಿಗೆ, ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಶುರುವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಈಗಾಗಲೇ ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 30°C ಹಾಗೂ ಕನಿಷ್ಠ 16°C ತಾಪಮಾನ ದಾಖಲಾಗುವ ಸಾಧ್ಯತೆಯಿದೆ.

ಕೋಲಾರದಲ್ಲಿ 29°C ಗರಿಷ್ಠ ಮತ್ತು 15°C ಕನಿಷ್ಠ ತಾಪಮಾನವಿರಲಿದೆ. ಕನಿಷ್ಠ ತಾಪಮಾನದಲ್ಲಿ ಸ್ಥಿರತೆ ಕಂಡುಬಂದರೂ, ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !