ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಛಲ್ ವಿವಾಹ ರದ್ದಾದ ಬೆನ್ನಲ್ಲೇ ತಮ್ಮ ವೃತ್ತಿಜೀವನದತ್ತ ಗಮನಹರಿಸಲು ಶುರು ಮಾಡಿದ್ದಾರೆ.ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ‘ಅನ್‌ಫಾಲೋ’ ಮಾಡಿಕೊಂಡಿದ್ದಾರೆ. ಪಲಾಶ್ ಮುಚ್ಛಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಂಧಾನ ಅವರೊಂದಿಗೆ ಹಂಚಿಕೊಂಡಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಪಲಾಶ್ ಮತ್ತು ಮಂಧಾನ ಅವರ ನಡುವಿನ ಪ್ರಪೋಸಲ್ ವಿಡಿಯೊ, ಮಹಿಳಾ ವಿಶ್ವಕಪ್ ಟ್ರೋಫಿ ಗೆದ್ದಾಗ ಅವರೊಂದಿಗೆ ಹಂಚಿಕೊಂಡಿದ್ದ ಫೋಟೋಗಳು ಹಾಗೂ ನಿಶ್ಚಿತಾರ್ಥದ ವಿಡಿಯೊ ಸೇರಿದಂತೆ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.
ಭಾನುವಾರ ಮಂಧಾನ ಮತ್ತು ಪಲಾಶ್ ತಮ್ಮ ವಿವಾಹ ರದ್ದಾದ ಬಗ್ಗೆ ಅಧಿಕೃತ ಪ್ರಕಟನೆ ಮೂಲಕ ಖಚಿತಪಡಿಸಿದ್ದರು. ಎಲ್ಲವನ್ನು ಇಲ್ಲಿಗೇ ಬಿಟ್ಟು, ಮುಂದುವರಿಯುವ ಆಲೋಚನೆ ಮಾಡಿರುವುದಾಗಿ ಮತ್ತು ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು.

