Sunday, January 11, 2026

Weight Gain | ಬೆಂಕಿ ಕಡ್ಡಿ ರೀತಿ ಇದ್ದೀಯ..! ಅಂತ ತಮಾಷೆ ಮಾಡ್ತಾರಾ? ಹಾಗಿದ್ರೆ ಈ ಜ್ಯೂಸ್ ಕುಡಿದು ತೂಕ ಹೆಚ್ಚಿಸಿಕೊಳ್ಳಿ

ತೂಕ ಹೆಚ್ಚಿರೋರು ಕಡಿಮೆ ಮಾಡೋಕೆ ನೋಡ್ತಿದ್ರೆ. ತೂಕ ಕಡಿಮೆ ಇರೋರು ಹೆಚ್ಚು ಮಾಡೋಕೆ ನೋಡ್ತಿದ್ದಾರೆ. ಎಲ್ಲರ ಪಾಡು ಇದೆ. ಆದ್ರೆ ಕೆಲವರು ಎಷ್ಟು ಊಟ ಮಾಡಿದರೂ ತೂಕ ಹೆಚ್ಚಾಗೋದೇ ಇಲ್ಲ ಅಂತಾರೆ. ಇಂತಹವರಿಗೆ ಕೇವಲ ಜಂಕ್ ಫುಡ್ ಅಲ್ಲ, ಪೌಷ್ಟಿಕಾಂಶಗಳಿಂದ ತುಂಬಿರುವ ಸರಿಯಾದ ಆಹಾರವೇ ದೇಹವನ್ನು ಬಲಿಷ್ಠವಾಗಿಸುತ್ತದೆ. ಅದರಲ್ಲೂ ಪ್ರತಿದಿನ ಒಂದು ಗ್ಲಾಸ್ ಆರೋಗ್ಯಕರ ಜ್ಯೂಸ್ ಕುಡಿಯುವುದರಿಂದ ತೂಕವನ್ನು ಸಹಜವಾಗಿಯೇ ಹೆಚ್ಚಿಸಿಕೊಳ್ಳಲು ಸಾಧ್ಯ.

ಜ್ಯೂಸ್ ಮಾಡೋದು ಹೇಗೆ?

ಈ ಜ್ಯೂಸ್‌ಗೆ ಬೇಕಾಗುವ ಮುಖ್ಯ ಪದಾರ್ಥಗಳು ಬಾಳೆಹಣ್ಣು, ಹಾಲು, ಖರ್ಜೂರ, ಅಗಸೆ ಬೀಜಗಳು ಅಥವಾ ಬಾದಾಮಿ ಮತ್ತು ಸ್ವಲ್ಪ ಜೇನುತುಪ್ಪ. ಇವು ಎಲ್ಲವೂ ಸಹ ಪ್ರೋಟೀನ್, ಉತ್ತಮ ಕೊಬ್ಬು, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ಜ್ಯೂಸ್ ದೇಹಕ್ಕೆ ತಕ್ಷಣ ಶಕ್ತಿ ನೀಡುವುದರ ಜೊತೆಗೆ ಮಾಂಸಖಂಡಗಳ ಬೆಳವಣಿಗೆಗೂ ಸಹಾಯಕ.

ಈ ಜ್ಯೂಸ್ ಅನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ವ್ಯಾಯಾಮದ ನಂತರ ಕುಡಿದರೆ ಉತ್ತಮ ಫಲಿತಾಂಶ ಕಾಣಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ಆಹಾರ ಸರಿಯಾಗಿ ಹೀರಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ಶಕ್ತಿ, ಉತ್ಸಾಹ ಮತ್ತು ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

ಆದರೆ ಈ ಜ್ಯೂಸ್ ಜೊತೆಗೆ ಸಮತೋಲನ ಆಹಾರ, ಸಾಕಷ್ಟು ನಿದ್ರೆ ಹಾಗೂ ಲಘು ವ್ಯಾಯಾಮವೂ ಇದ್ದರೆ ಮಾತ್ರ ಆರೋಗ್ಯಕರ ತೂಕ ವೃದ್ಧಿ ಸಾಧ್ಯ. ಅತ್ಯಂತ ಮುಖ್ಯವಾಗಿ ನಿರಂತರತೆ ಇರಬೇಕು. ದಿನಕ್ಕೆ ಒಂದು ಗ್ಲಾಸ್ ಈ ಪೌಷ್ಟಿಕ ಜ್ಯೂಸ್ ನಿಮ್ಮ ದೇಹಕ್ಕೆ ಹೊಸ ಬಲ ನೀಡುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!