January17, 2026
Saturday, January 17, 2026
spot_img

Weight Loss | ತೂಕ ಕಡಿಮೆ ಮಾಡ್ಕೋಳೋಕೆ ಬ್ಲಾಕ್ ಕಾಫಿ ಬದಲು ಈ ನೀರು ಕುಡಿಯಿರಿ

ಇಂದಿನ ಯುಗದಲ್ಲಿ ತೂಕ ಹೆಚ್ಚಾಗೋ ಸಮಸ್ಯೆ ಅನೇಕ ಜನರನ್ನು ಕಾಡುತ್ತಿದೆ. ಕೆಲವರು ಜಿಮ್‌ಗೆ ಹೋಗಿ ಗಂಟೆಗಟ್ಟಲೆ ವ್ಯಾಯಾಮ ಮಾಡುತ್ತಾರೆ, ಮತ್ತೂ ಕೆಲವರು ಕಟ್ಟುನಿಟ್ಟಿನ ಡಯಟ್ ಪಾಲಿಸುತ್ತಾರೆ. ಆದರೆ, ದಿನನಿತ್ಯದ ಸಣ್ಣ ಅಭ್ಯಾಸ ಬದಲಾವಣೆಯೂ ತೂಕ ಇಳಿಕೆಗೆ ದೊಡ್ಡ ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದು ಅದರಲ್ಲೊಂದು ಅತ್ಯುತ್ತಮ ವಿಧಾನವೆಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಜೀರಿಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಇರುವ ಮಸಾಲೆ. ಇದು ಅಡುಗೆಗೆ ರುಚಿ ನೀಡುವುದಷ್ಟೇ ಅಲ್ಲ, ಔಷಧೀಯ ಗುಣಗಳಿಂದ ಕೂಡಿದೆ. ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹ ಶುದ್ಧವಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕ ನಿಯಂತ್ರಣದಲ್ಲಿರುತ್ತದೆ.

  • ತೂಕ ಇಳಿಸಲು ಸಹಾಯಕ: ಜೀರಿಗೆ ನೀರು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದು ಮೆಟಾಬಾಲಿಸಂ ಅನ್ನು ವೇಗಗೊಳಿಸಿ, ಕ್ಯಾಲೊರಿ ಕರಗಿಸುವ ಕ್ರಿಯೆಯನ್ನು ಉತ್ತೇಜಿಸುತ್ತದೆ.
  • ಜೀರ್ಣಕ್ರಿಯೆ ಸುಧಾರಣೆ: ಜೀರಿಗೆ ನೀರು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸಿ ಆಹಾರ ಜೀರ್ಣವನ್ನು ಸುಲಭಗೊಳಿಸುತ್ತದೆ. ಇದು ವಾಯು, ಆಮ್ಲೀಯತೆ, ಮಲಬದ್ಧತೆ ಮುಂತಾದ ಸಮಸ್ಯೆಗಳಿಂದ ಸಹ ಪರಿಹಾರ ನೀಡುತ್ತದೆ.
  • ಚರ್ಮದ ಆರೋಗ್ಯಕ್ಕೆ ಉತ್ತಮ: ಜೀರಿಗೆ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು (antioxidants) ಹೆಚ್ಚಿದ್ದು, ಚರ್ಮವನ್ನು ಹಾನಿಕಾರಕ ಕಣಗಳಿಂದ ರಕ್ಷಿಸುತ್ತದೆ. ಇದು ಮೊಡವೆ, ಕಲೆ ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ.
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಜೀರಿಗೆ ನೀರು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ರಕ್ತ ಶುದ್ಧಗೊಳಿಸುವಲ್ಲಿ ಸಹಕಾರಿಯಾಗಿದೆ.
  • ರಕ್ತದೊತ್ತಡ ನಿಯಂತ್ರಣ: ಜೀರಿಗೆ ನೀರಿನ ಖನಿಜಾಂಶಗಳು ಮತ್ತು ಪ್ರಾಕೃತಿಕ ಅಂಶಗಳು ರಕ್ತದೊತ್ತಡವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತವೆ. ಇದರಿಂದ ಹೃದಯದ ಆರೋಗ್ಯವೂ ಕಾಪಾಡಬಹುದು.

ಜೀರಿಗೆ ನೀರು ತಯಾರಿಸುವ ವಿಧಾನ:
ರಾತ್ರಿಯಲ್ಲಿ ಒಂದು ಲೋಟ ನೀರಿನಲ್ಲಿ ಒಂದು ಟೀಚಮಚ ಜೀರಿಗೆಯನ್ನು ನೆನೆಸಿ ಬಿಡಿ. ಬೆಳಿಗ್ಗೆ ಅದನ್ನು ಸ್ವಲ್ಪ ಬಿಸಿ ಮಾಡಿ ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಕೆಲವರಿಗೆ ಜೀರಿಗೆಗೆ ಅಲರ್ಜಿ ಇರುವ ಸಾಧ್ಯತೆ ಇದೆ. ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ವೈದ್ಯರ ಸಲಹೆ ಪಡೆಯದೇ ಈ ನೀರನ್ನು ಕುಡಿಯಬಾರದು.

Must Read

error: Content is protected !!