Friday, January 9, 2026

HEALTH | ಚಳಿಗಾಲದ ಸೀಸನ್‌ನ ಪ್ರತೀ ಮನೆಯ ರಾಜ ʼಅವರೆಕಾಳುʼ ತಿನ್ನೋದ್ರಿಂದ ಏನು ಲಾಭ?

ಚಳಿಗಾಲದಲ್ಲಿ ಅವರೆಕಾಳು ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದೊರೆಯುತ್ತದೆ. ಅವರೆಕಾಳಿನಿಂದ ಹಲವಾರು ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇದು ನಾಲಗೆಗೆ ರುಚಿಕರವಾಗಿರುವುದು ಮಾತ್ರವಲ್ಲ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಪ್ರತೀ ಮನೆಯ ಮುಂದೆಯೂ ಈ ಸೀಸನ್‌ನಲ್ಲಿ ಅವರೆಕಾಳಿನ ಸಿಪ್ಪೆ ಕಾಣುತ್ತದೆ. ಅವರೆಕಾಳಿನ ಮಸಾಲೆ ಸಾರು, ಅವರೆಕಾಳು ಕೈಮಾ ಉಂಡೆ ಸಾರು, ಅವರೆಕಾಳು ಉಪ್ಪಿಟ್ಟು, ಪಲಾವ್‌, ಮಿಕ್ಸ್ಚರ್‌, ದೋಸೆ ಹೀಗೆ ತರತರದ ಭಕ್ಷ್ಯ ತಯಾರಿಸಲಾಗುತ್ತದೆ. ಸೀಸನ್‌ನಲ್ಲಿದ್ದಾಗ ಅವರೆಕಾಳನ್ನು ತಿಂದುಬಿಡಿ ಯಾಕೆ ಗೊತ್ತಾ?

ತಾಮ್ರ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪ್ರೋಟೀನ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಅವರೆ ಬೀಜಗಳಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವರೆಕಾಳನ್ನು ಸೇವಿಸುವುದರಿಂದ ಗಂಟಲು, ಹೊಟ್ಟೆ ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಭಾರತಕ್ಕೆ ಬನ್ನಿ ಇಲ್ಲವಾದ್ರೆ ಅಂಕ ಕಳೆದುಕೊಳ್ಳಿ ಅಷ್ಟೆ: ಬಾಂಗ್ಲಾಗೆ ಐಸಿಸಿ ಖಡಕ್‌ ಸಂದೇಶ

ಅವರೆಕಾಳು ಉತ್ಕರ್ಷಣ ನಿರೋಧಕಗಳು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವರೆಕಾಳು ವಿಟಮಿನ್ ಸಿ ಮತ್ತು ಇ, ಬೀಟಾ-ಕ್ಯಾರೋಟಿನ್, ಸತು, ಕಬ್ಬಿಣ ಮತ್ತು ಮ್ಯಾಂಗನೀಸ್ ಸೇರಿದಂತೆ ಇತರ ಅಗತ್ಯಗಳನ್ನು ಪೂರೈಸುತ್ತದೆ.

ಶೀತ ಋತುವಿನಲ್ಲಿ ಜೀರ್ಣಕಾರಿ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗಿದೆ. ಅವರೆಕಾಳಿನಲ್ಲಿ ಫೈಬರ್ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಅವರೆಕಾಳನ್ನು ಸೇವಿಸುವ ಮೂಲಕ ನೀವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಬಹುದು.

error: Content is protected !!