March 31, 2026
Tuesday, March 31, 2026
spot_img

HEALTH | ಮಕ್ಕಳನ್ನೂ ಬಿಡದೇ ಕಾಡುವ ‘Acid reflux’ಗೆ ಮನೆ ಮದ್ದುಗಳೇನು?

ಬೇಸಿಗೆಯಲ್ಲಿ ಹೆಚ್ಚಿನ ಜನರಿಗೆ ಆಸಿಡ್‌ ರಿಫ್ಲಕ್ಸ್‌ ಸಮಸ್ಯೆ ಕಾಡುತ್ತದೆ. ಹುಳಿ ತೇಗು, ಊಟ ಸೇರದೇ ಇರುವುದು, ವಾಂತಿ ಇನ್ನಿತರ ಸಮಸ್ಯೆಗಳು ಬಾಧಿಸುತ್ತದೆ. ಹೀಗಾಗಬಾರದು ಅಂದ್ರೆ ಇದನ್ನು ಫಾಲೋ ಮಾಡಿ..

ಸರಿಯಾದ ಸಮಯಕ್ಕೆ ಊಟ ತಿಂಡಿ ತಿನ್ನಿ. ಹೊಟ್ಟೆಯನ್ನು ಬಹಳಷ್ಟು ಸಮಯ ಖಾಲಿ ಬಿಡಬೇಡಿ. ಇದು ಆಸಿಡ್‌ ಉತ್ಪತ್ತಿಗೆ ಕಾರಣವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಆಮ್ಲ ಪದಾರ್ಥಗಳನ್ನು ತಿನ್ನಬೇಡಿ. ನಿಂಬೆಹುಳಿ, ಸಿಟ್ರಿಕ್‌ ಹಣ್ಣುಗಳಿಂದ ದೂರವಿರಿ

ಊಟದ ತಕ್ಷಣ ವಾಕ್‌ ಮಾಡಿ, ಮಲಗಬೇಡಿ ಇದರಿಂದಲೂ ಆಸಿಡ್‌ ರಿಫ್ಲಕ್ಸ್‌ ಉಂಟಾಗುತ್ತದೆ.

ಮಲಗುವ ದಿಂಬನ್ನು ಸ್ವಲ್ಪ ಮೇಲಕ್ಕೆ ಹಾಕಿಕೊಂಡು ಮಲಗಿ, ಲೆಫ್ಟ್‌ ಕಡೆಗೆ ತಿರುಗಿ ಮಲಗುವುದು ಬೆಸ್ಟ್‌

ಆಗಾಗ ಸ್ವಲ್ಪ ಸ್ವಲ್ಪವೇ ತಿನ್ನಿ. ಒಂದೇ ಬಾರಿಗೆ ದೊಡ್ಡ ಮೀಲ್ಸ್‌ ತಿನ್ನಬೇಡಿ.

ರಾತ್ರಿ ಲೇಟಾಗಿ ಊಟ ಮಾಡುವ ಅಭ್ಯಾಸ ಬಿಟ್ಟುಬಿಡಿ. ತೂಕ ಇಳಿಸಿಕೊಳ್ಳಿ. ಟೈಟ್‌ ಆದ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ.

ನಿತ್ಯವೂ ರಾತ್ರಿ ಶುಂಠಿ, ಓಂ ಕಾಳು, ಜೀರಿಗೆ ಅಥವಾ ಅಲೋವೆರಾ ಜ್ಯೂಸ್‌ ಕುಡಿಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !