March 15, 2026
Sunday, March 15, 2026
spot_img

ಟ್ರ್ಯಾಕ್ಟರ್‌ ಡಿಕ್ಕಿಯಾದ ರಭಸಕ್ಕೆ ಪಲ್ಟಿಯಾದ ಕಾರ್‌, ಒಳಗಿದ್ದವರಿಗೆ ಏನಾಯ್ತು?

ಹೊಸದಿಗಂತ ವರದಿ ಮುಂಡಗೋಡ:

ಕಾರ್ ಹಾಗೂ ಟ್ರ್ಯಾಕ್ಟರ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಭಸಕ್ಕೆ ಕಾರ್ ಪಲ್ಟಿಯಾದ ಘಟನೆ ತಾಲೂಕಿನ ತಟ್ಟಿಹಳ್ಳಿಯ ಟಿಬೆಟಿಯನ್ ಕ್ಯಾಂಪ್ ಹತ್ತಿರ ಗುರುವಾರ ಸಾಯಂಕಾಲ ಜರುಗಿದೆ.

ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ತೆರಳುತ್ತಿರುವ ಕಾರು ಹಾಗೂ ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಟ್ರಾಕ್ಟರ್ ಗೆ ಮುಖಾಮುಕಿ ಡಿಕ್ಕಿಯಾಗಿ ರಭಸಕ್ಕೆ ಕಾರು ಪಲ್ಟಿಯಾಗಿದೆ.


ಕಾರಲ್ಲಿದ್ದ ಒಂದು ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ ಸ್ಥಳಕ್ಕೆ ಬಂದ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !