Wednesday, January 28, 2026
Wednesday, January 28, 2026
spot_img

ಬಬಲ್‌ ಗಮ್‌ ನುಂಗಿಬಿಟ್ರೆ ಏನಾಗತ್ತೆ? ಹೊಟ್ಟೆ ನೋವು ಗ್ಯಾರಂಟಿನಾ?

ಮಕ್ಕಳಿಗೆ ಸಾಮಾನ್ಯವಾಗಿ ಬಬಲ್‌ ಗಮ್‌ಗಳನ್ನು ಕೊಡೋದಿಲ್ಲ. ಕೊಟ್ಟರೂ ಅಗಿದು ಉಗಿಯಬೇಕು, ಹಾಗೆ ನುಂಗಿಬಿಟ್ಟರೆ ಹೊಟ್ಟೆನೋವು ಬರುತ್ತದೆ. ನಂತರ ಹೊಟ್ಟೆಯ ಆಪರೇಷನ್‌ ಮಾಡಿ ತೆಗೆಯಬೇಕಾಗುತ್ತದೆ ಎಂದು ದೊಡ್ಡವರು ಹೆದರಿಸುತ್ತಾರೆ.

ಇದಕ್ಕೆ ನಿಜವಾದ ಕಾರಣ ಏನು? ಬಬಲ್‌ ಗಮ್‌ ನುಂಗಿದ್ರೆ ಏನಾಗತ್ತೆ?

ಬಬಲ್‌ ಗಮ್‌ ಆರೋಗ್ಯಕ್ಕೆ ಉತ್ತಮ ಪದಾರ್ಥ ಅಲ್ಲ, ಅದನ್ನು ಸದಾ ಅವಾಯ್ಡ್‌ ಮಾಡಿ. ಅಪರೂಪಕ್ಕೆ ಒಮ್ಮೆ ಸೇವನೆ ಮಾಡಿದ್ರೂ ನುಂಗದಂತೆ ನೋಡಿಕೊಳ್ಳಿ. ಅಕಸ್ಮಾತ್‌ ನುಂಗಿದ್ರೂ ಏನೂ ಆಗೋದಿಲ್ಲ. ಒಂದು ಅಥವಾ ಎರಡು ದಿನದಲ್ಲಿ ಮಲದ ಮೂಲಕ ಅದು ಹೊರಗೆ ಹೋಗುತ್ತದೆ. ಇದು ಅಪರೂಪಕ್ಕೆ ಸರಿ, ಸದಾ ಬಬಲ್‌ ಗಮ್‌ ನುಂಗುತತಿದ್ದರೆ ಅಪಾಯ ಇದೆ. ಜೀರ್ಣಕ್ಕೆ ಕಷ್ಟವಾಗುವ ಇತರೆ ಪದಾರ್ಥದ ಜೊತೆ ಇದನ್ನು ತಿಂದರೆ ಕರುಳಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಆಗ ವೈದ್ಯರ ಸಹಾಯ ಬೇಕೇಬೇಕಾಗುತ್ತದೆ.

ಬಬಲ್‌ ಗಮ್‌ನ ಟೆಕ್ಸ್ಟರ್‌ನ್ನು ಕರುಳು ಬ್ರೇಕ್‌ ಮಾಡೋಕೆ ಆಗೋದಿಲ್ಲ. ಅದು ಜೀರ್ಣವಾಗದ ಫೈಬರ್‌ನಂತೆ ಹೊರಗೆ ಹೋಗುತ್ತದೆ. ಅದರಲ್ಲಿರುವ ಸಿಹಿ ಅಂಶವನ್ನು ದೇಹ ತೆಗೆದುಕೊಳ್ಳುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !