ಚಳಿಗಾಲ ಬಂತೆಂದರೆ ಸಾಕು, ನಮ್ಮ ತ್ವಚೆಯು ತೇವಾಂಶ ಕಳೆದುಕೊಂಡು ಒಣಗುವುದು, ಬಿರುಕು ಬಿಡುವುದು ಮತ್ತು ತುರಿಕೆ ಉಂಟಾಗುವುದು ಸರ್ವೇಸಾಮಾನ್ಯ. ಇದಕ್ಕೆ ಮುಖ್ಯ ಕಾರಣವೆಂದರೆ ತಣ್ಣನೆಯ ಗಾಳಿ. ಈ ಸಮಯದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆರೈಕೆ ಮತ್ತು ಉತ್ಪನ್ನಗಳ ಬಳಕೆ ಅಗತ್ಯ.
ಚಳಿಗಾಲದ ಚರ್ಮದ ಆರೈಕೆಗೆ ಎಣ್ಣೆ ಅಥವಾ ಲೋಷನ್ ಯಾವುದು ಬೆಸ್ಟ್?
ಎಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡಿದರೆ ಅದು, ಚರ್ಮದ ಆಳಕ್ಕೆ ಇಳಿದು ಅಗತ್ಯ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳನ್ನು ಒದಗಿಸುತ್ತವೆ. ಅಲ್ಲದೆ, ಚರ್ಮದ ಮೇಲೆ ಒಂದು ಪದರವನ್ನು ನಿರ್ಮಿಸಿ, ತೇವಾಂಶವು ಹೊರಹೋಗದಂತೆ ತಡೆಯುವಂತೆ ಮಾಡುತ್ತದೆ. ತೀವ್ರವಾದ ಶುಷ್ಕತೆಯಿಂದ ಉಂಟಾಗುವ ತುರಿಕೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತವೆ. ತ್ವಚೆಗೆ ಆರೋಗ್ಯಕರ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತವೆ.
ಇನ್ನು ಬಾಡಿ ಲೋಷನ್ ಎಣ್ಣೆ ಮತ್ತು ನೀರಿನ ಮಿಶ್ರಣವಾಗಿದ್ದು, ಸಾಮಾನ್ಯವಾಗಿ ಗ್ಲಿಸರಿನ್ ಅಥವಾ ಹೈಲುರಾನಿಕ್ ಆಮ್ಲದಂತಹ ಹ್ಯೂಮೆಕ್ಟಂಟ್‌ಗಳನ್ನು ಹೊಂದಿರುತ್ತವೆ.
ಇವು ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇದು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ತ್ವಚೆಯು ಬೇಗನೆ ಹೀರಿಕೊಳ್ಳುತ್ತವೆ. ಲೋಷನ್ ಬಳಕೆ ಚರ್ಮಕ್ಕೆ ತಕ್ಷಣದ ನೀರಿನ ಆಧಾರಿತ ತೇವಾಂಶವನ್ನು ಒದಗಿಸುತ್ತವೆ. ಜಿಡ್ಡಿನಾಂಶವನ್ನು ಕಡಿಮೆ ಇರುತ್ತದೆ. ಬೇಗನೆ ಹೀರಿಕೊಳ್ಳುವುದರಿಂದ ದೈನಂದಿನ ಬಳಕೆಗೆ ಅನುಕೂಲಕರವಾಗಿದೆ.
ಸ್ನಾನದ ನಂತರ ಒದ್ದೆಯಾಗಿರುವ ತ್ವಚೆಗೆ ನೀರಿನ ಆಧಾರಿತ ಲೋಷನ್ ಹಚ್ಚುವುದರಿಂದ ಚರ್ಮದ ಪದರಗಳಿಗೆ ಆಳವಾದ ಹೈಡ್ರೇಶನ್ ಸಿಗುತ್ತದೆ. ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದ್ದು, ಸಾಮಾನ್ಯ, ಸಂಯೋಜಿತ ಅಥವಾ ಎಣ್ಣೆಯುಕ್ತ ಚರ್ಮದ ಪ್ರಕಾರಗಳಿಗೆ ಹೆಚ್ಚು ಸೂಕ್ತವಾಗಿದೆ. ಕೆಲವೊಮ್ಮೆ ನಿರ್ದಿಷ್ಟ ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಕೂಡ ಇದು ಸಹಾಯ ಮಾಡುತ್ತದೆ.
ಒಟ್ಟಾರೆ ಚಳಿಗಾಲದಲ್ಲಿ ತ್ವಚೆಯಲ್ಲಿ ತೇವಾಂಶ ಮತ್ತು ರಕ್ಷಣೆಗಾಗಿ ಎರಡೂ ಉತ್ಪನ್ನಗಳನ್ನು ಒಟ್ಟಿಗೆ ಬಳಸುವುದು ಉತ್ತಮ ಮಾರ್ಗವಾಗಿದೆ.
ಉತ್ತಮ ಹೀರಿಕೊಳ್ಳುವಿಕೆಗಾಗಿ ಸ್ನಾನದ ನಂತರ ಒದ್ದೆಯಾದ ಚರ್ಮದ ಮೇಲೆ ನಿಮಗೆ ಇಷ್ಟವಾದ ಎಣ್ಣೆಯ ಕೆಲವು ಹನಿಗಳನ್ನು ಹಚ್ಚಿಕೊಳ್ಳಿ. ನಿಮ್ಮ ರಾತ್ರಿಯ ಚರ್ಮದ ಆರೈಕೆಗೆ ರಾಸಾಯನಿಕಗಳಿರುವ ಮಾಯಿಶ್ಚರೈಸರ್ ಬದಲು ತೈಲಗಳನ್ನು ಬಳಸಿ. ರಾತ್ರಿಯಿಡೀ ಈ ತೈಲಗಳು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಿ, ಒಣಗದಂತೆ ಕಾಪಾಡುತ್ತವೆ.

