January14, 2026
Wednesday, January 14, 2026
spot_img

ಗಾಯಕ ಜುಬೀನ್‌ ಗರ್ಗ್‌ ಸಾವಿನ ಕಾರಣವೇನು? ಸಿಂಗಾಪುರ ಪೊಲೀಸರು ನೀಡಿದ್ರು ಬಿಗ್ ಅಪ್ ಡೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಗಾಯಕ ಜುಬೀನ್‌ ಗರ್ಗ್‌ ಸಾವಿನ ಕುರಿತು ಸಿಂಗಾಪುರ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದು. ಜುಬೀನ್‌ ಗರ್ಗ್‌ ಕೊಲೆಯಾಗಿಲ್ಲ. ಲೈಫ್‌ ಜಾಕೆಟ್‌ ನಿರಾಕರಿಸಿದ್ದಕ್ಕೆ ಸಾವು ಸಂಭವಿಸಿತು ಎಂದು ಸ್ಪಷ್ಟಪಡಿಸಿದ್ದಾರೆ.

ಲೈಫ್‌ ಜಾಕೆಟ್‌ ಧರಿಸಲು ಜುಬೀನ್‌ ನಿರಾಕರಿಸಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಸಿಂಗಾಪುರದ ಕೊರೋನರ್ ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ. ಸಿಂಗಾಪುರ ಪೊಲೀಸರು ಗರ್ಗ್‌ ಅವರ ಸಾವಿನಲ್ಲಿ ಯಾವುದೇ ಕ್ರಿಮಿನಲ್ ಅಪರಾಧದ ಶಂಕೆ ವ್ಯಕ್ತಪಡಿಸಿಲ್ಲ.

52 ವರ್ಷದ ಗಾರ್ಗ್ ಸೆ.19 ರಂದು ಸಿಂಗಾಪುರದ ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ನಿಗದಿಯಾಗಿದ್ದ ಒಂದು ದಿನ ಮೊದಲು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅಸ್ಸಾಮಿ ಗಾಯಕ ಆರಂಭದಲ್ಲಿ ಲೈಫ್ ಜಾಕೆಟ್ ಧರಿಸಿದ್ದರು. ಆದರೆ, ಅದನ್ನು ತೆಗೆದು ನಂತರ ಅವರಿಗೆ ನೀಡಲಾದ ಎರಡನೆಯದನ್ನು ಧರಿಸಲು ನಿರಾಕರಿಸಿದ್ದರು ಎಂದು ಮುಖ್ಯ ತನಿಖಾಧಿಕಾರಿ ವಿಚಾರಣೆಯ ಆರಂಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆಂದು ವರದಿಯಾಗಿದೆ.

ಗಾರ್ಗ್ ಅವರ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅವರ ದೇಹದ ಮೇಲೆ ಕೆಲವು ಗಾಯಗಳು ಕಂಡುಬಂದಿವೆ. ಆದರೆ, ಸಿಪಿಆರ್ ಮತ್ತು ರಕ್ಷಣಾ ಪ್ರಯತ್ನಗಳ ಸಮಯದಲ್ಲಿ ಗಾಯಗಳಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.

Most Read

error: Content is protected !!